ಚಿತ್ರದುರ್ಗ: ಕೆಲಸ ಇಲ್ಲದ ಬಡಗಿ ಅದೇನು ಮಾಡಿದನಂತೆ ಎಂಬ ಗಾದೆ ನೆನಪಿದೆ ತಾನೆ. ಅದು ಹೋಗಲಿ ವಿಧಾನಸೌಧದಲ್ಲಿ ಸಭೆ ನಡೆಯುವಾಗ ಮೊಬೈಲ್ ನಲ್ಲಿ ಚಾಟಿಂಗ್ ಮಾಡಿದ ಶಾಸಕರನ್ನು ನೋಡಿದ್ದೀರ ಅಲ್ವ ಆದ್ರೆ ದುರ್ಗದ ಜಿಲ್ಲಾ ಪಂಚಾಯತ್ ನ  ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ವಾಟ್ಸ್‌ಆಪ್‌ನಲ್ಲಿ ಚಕ್ಕಂದ ಆಡುವ ಅಧಿಕಾರಿಯೊಬ್ಬರು ಕ್ಯಾಮರ ಕಣ್ಣಿಗೆ ಸಿಕ್ಕಿ ಬಿದ್ದಿರುವ ದೃಶ್ಯ ವೈರಲ್.

ಕೆಡಿಪಿ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿಯೊಬ್ಬರು ವಾಟ್ಸ್‌ಆಪ್‌ನಲ್ಲಿ ಒಂದೇ ಬಾರಿ ಇಬ್ಬರು ಯುವತಿಯರೊಂದಿಗೆ ಸರಸ ಸಲ್ಲಾಪವಾಡುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಅಕ್ಷರ ದಾಸೋಹ ಅಧಿಕಾರಿ ದಾರುಕೇಶ್ ಅವರು ಸಭೆ ನಡೆಯುವಾಗ ವಾಟ್ಸ್‌ಆಫ್ ಮೆಸೆಜ್ ಮಾಡುತ್ತಿದ್ದರು. ಅದೂ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದು ಕ್ಯಾಮರದಲ್ಲಿ ಸರೆ ಆಗಿದೆ.

ಆದ್ರೆ ಚಾಟ್ ನಲ್ಲಿ ಅಶ್ಲೀಲ ಡೈಲ್ಆಗ್ ನ್ನು ಕಟ್ ಮಾಡಲಾಗಿದೆ. ಜನಪ್ರತಿನಿಧಿಗಳೇ ಇಂತ ಕಾರ್ಯದಲ್ಲಿ ಮಗ್ನರಾದರೆ ಇನ್ನು ಅಧಿಕಾರಿಗಳಿಗೆ ಲಗಾಮ್ ಏನು ಅಂತ ಪ್ರಶ್ನೆ ಮಾಡುವ ಸರದಿ ಯಾರದ್ದು.?