ಚಿತ್ರದುರ್ಗ: ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಅಂತ ಪಟ್ಟಿ ಬಿಡುಗಡೆಯಾಗಿದೆ. ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ಕ್ಷೇತ್ರಗಳಲ್ಲಿ ಆಯಾ ಶಾಸಕರುಗಳಿಗೆ ಟಿಕೆಟ್ ನೀಡಲಾಗಿದೆ.

ಆದ್ರೆ ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಮಾತ್ರ ಯಾರು ಅಭ್ಯರ್ಥಿ ಎಂದು ಕುತುಹಲ ಜನರಿಗೆ ಮೂಡಿತ್ತು. ಆದ್ರೆ ಇಂದು ಕಾಂಗ್ರೆಸ್ ಪಟ್ಟಿಯಲ್ಲಿ ಅಧಿಕೃತವಾಗಿ ಚಿತ್ರದುರ್ಗಕ್ಕೆ ಹನುಮಲಿ ಷಣ್ಮುಖಪ್ಪ, ಮೊಳಕಾಲ್ಮೂರು ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಯುವಕ ಯೋಗೀಶ ಬಾಬುಗೆ ಟಿಕೆಟ್ ನೀಡಲಾಗಿದೆ. ಇದರಿಂದ ದುರ್ಗದಲ್ಲಿ ಚುನಾವಣೆ ರಂಗೇರಲಿದೆ.