ಚಿತ್ರದುರ್ಗ: ಅತಿಹೆಚ್ಚು 106.8 ಮಿ.ಮೀ ಮಳೆ ಚಿತ್ರದುರ್ಗದಲ್ಲಿ ಆಗಿದೆ. , ರಾತ್ರಿ ಮಳೆ ಧಾರಾಕಾರವಾಗಿ ಸುರಿದಿದ್ದರಿಂದ , ನಗರದ ಮಧ್ಯೆ ಇರುವ ಸಂತೆ ಹೊಂಡ ತುಂಬಿ ತುಳುಕುತ್ತಿದೆ. ಚಂದ್ರವಳ್ಳಿಕೆರೆ ಸೇರಿದಂತೆ ಮಲ್ಲಾಪುರ ಕೆರೆ ಭರ್ತಿಆಗಿದೆ.

 

ಸಿಹಿನೀರು ಹೊಂಡದ ರಾಜಕಾಲುವೆ ಒತ್ತುವರಿ ಮಾಡಿದ್ದು, ಮುಚ್ಚಿರುವ ರಾಜಕಾಲುವೆಯನ್ನು  ತೆರವುಗೊಳಿಸಿ ರಸ್ತೆಗೆ ನೀರು ನುಗ್ಗುವುದನ್ನು ತಡೆಗಟ್ಟಬೇಕು ಮತ್ತು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಹೊಳಲ್ಕೆರೆ ರಸ್ತೆ ತಡೆ ಮಾಡುವ‌ ಮೂಲಕ ಪ್ರತಿಭಟನೆ‌ ನಡೆಸಿದರು:

 

ಹೊಳಲ್ಕೆರೆ ರಸ್ತೆ ಕುಸಿತ, ಐತಿಹಾಸಿಕ ಸಂತೆಹೊಂಡಕ್ಕೆ ನೀರು ಹರಿದುಹೋಗುವ ಮಾರ್ಗ ಕುಸಿತ, ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ, ಸಂಚಾರ ಅಸ್ತವ್ಯಸ್ತವಾಯಿತು.

ಮಳೆಯ ವಿವರದನ್ವಯ ಚಿತ್ರದುರ್ಗ ತಾಲ್ಲೂಕು ಚಿತ್ರದುರ್ಗ 2 ರಲ್ಲಿ 106.8 ಮಿ.ಮೀ. ಮಳೆಯಾಗಿದೆ.

ಚಳ್ಳಕೆರೆ ತಾ: ಚಳ್ಳಕೆರೆ 18.2, ಪರಶುರಾಂಪುರ 9,4, ನಾಯಕನಹಟ್ಟಿ 18.2, ಡಿ.ಮರಿಕುಂಟೆ 70.6, ತಳಕು 38, ಚಿತ್ರದುರ್ಗ 1 ರಲ್ಲಿ 106.6, ಚಿತ್ರದುರ್ಗ 2 ರಲ್ಲಿ 106.8, ಹಿರೇಗುಂಟನೂರು 7, ಐನಹಳ್ಳಿ 55, ಭರಮಸಾಗರ 14, ಸಿರಿಗೆರೆ 23.8, ತುರುವನೂರು 37.4,

 

ಹಿರಿಯೂರು ತಾ: ಹಿರಿಯೂರು ತಾ: ಹಿರಿಯೂರು 28.8, ಬಬ್ಬೂರು 25.6, ಈಶ್ವರಗೆರೆ 44, ಇಕ್ಕನೂರು 40, ಸೂಗೂರು 6.4, ಜೆ.ಜಿ.ಹಳ್ಳಿ 37,

ಹೊಳಲ್ಕೆರೆ ತಾ: ಹೊಳಲ್ಕೆರೆ 9.4, ರಾಮಗಿರಿ 22.2, ಚಿಕ್ಕಜಾಜೂರು 35.8, ಬಿ.ದುರ್ಗ 55.4, ಹೆಚ್.ಡಿ.ಪುರ 62, ತಾಳ್ಯ 10.4,

ಹೊಸದುರ್ಗ ತಾ: ಹೊಸದುರ್ಗ 32.6, ಬಾಗೂರು 40, ಮತ್ತೋಡು 34.4, ಶ್ರೀರಾಂಪುರ 16.2, ಮಾಡದಕೆರೆ 50.2,

ಮೊಳಕಾಲ್ಮೂರು ತಾ: ಮೊಳಕಾಲ್ಮೂರು 13.2, ಬಿ.ಜಿ.ಕೆರೆ 30.2, ರಾಂಪುರ 19.3, ದೇವಸಮುದ್ರ 12.4, ರಾಯಪುರ 11.6 ಮಿ.ಮಿ. ಮಳೆಯಾಗಿದೆ.