ಬೆಂಗಳೂರು: ಖರ್ಗೆಗೆ ಸಿಎಂ ಪಟ್ಟ ನೀಡದೇ ಕಾಂಗ್ರೆಸ್ ವಂಚಿಸಿದೆ ಎಂದು ಹೇಳಿ, ನಂತರ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದಿಂದ ತಿರುಗೇಟು ಪಡೆದು ಮುಜುಗರಕ್ಕೆ ಮೋದಿ ಒಳಗಾಗಿದ್ದರು.
ಲೋಕಸಭೆಯಲ್ಲಿ ವಿಪಕ್ಷ ನಾಯಕ ಸ್ಥಾನ ನೀಡದೆ ಖರ್ಗೆಗೆ ಮೋಸ ಮಾಡಿದ್ದು ಮೋದಿ ಅಲ್ವಾ. ದಲಿತರ ಮೇಲೆ ಕಾಳಜಿ ಇದ್ದರೆ ಬಿಜೆಪಿ ಕಾರಜೋಳ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಸಲಿ ಎಂದು ಕಾಂಗ್ರೆಸ್ ಸವಾಲು ಹಾಕುವ ಮೂಲಕ ತಿರುಗೇಟು ನೀಡಿದ್ದರು. ಇದರಿಂದ ಮೋದಿ ಮಾತು ಮಾತು ಬಿಜೆಪಿಗೆ ತಿರುಗಬಾಣವಾಗಿತ್ತು.
ಇಂತಹದ್ದೆ ಚಿತ್ರದುರ್ಗದಲ್ಲಿ ಯಡವಟ್ಟು ಮಾತನ್ನು ಮೋದಿ ಆಡಿದ್ದಾರೆ.
ತಮ್ಮ ಭಾಷಣದಲ್ಲಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ. ಇದಕ್ಕೆ ಕಾರಣ ಎಸ್ಸೆನ್ ಅವರು ನೆಹರು ಅವರ ಆರ್ಥಿಕ ನೀತಿ ಖಂಡಿಸಿದ್ದು, ಜತೆಗೆ ನೆಹರು ವಿರುದ್ಧ ಬಂಡಾಯವೆದ್ದಿದ್ದು ಎಂದು ಹೇಳಿದ್ದಾರೆ.
ಆದರೆ, ಸ್ವಾತಂತ್ರ್ಯ ಹೋರಾಟಗಾರರಾದ ಎಸ್. ನಿಜಲಿಂಗಪ್ಪ ಅವರು ತಮ್ಮ ಕೊನೆ ಜೀವಿತದ ಅವಧಿಯವರೆಗೆ ನೆಹರು ಕುರಿತು ಹೆಚ್ಚು ಗೌರವ ಹೊಂದಿದ್ದರು. ಎಸ್ಸೆನ್ ಬಂಡಾಯವೆದ್ದಿದ್ದು ಇಂದಿರಾಗಾಂಧಿ ವಿರುದ್ಧ ಎಂಬುದನ್ನು ಮೋದಿ ಮರೆತು ನೆಹರು ಹೆಸರು ಪ್ರಸ್ತಾಪಿಸಿ ವಿವಾದಕ್ಕೆ ಸಿಲುಕಿದ್ದಾರೆ.
ಜತೆಗೆ ಹೊಸದುರ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ನಿಜಲಿಂಗಪ್ಪ (ಮುಖ್ಯಮಂತ್ರಿ ಅಭ್ಯರ್ಥಿ) ವಿರುದ್ಧ ಪಿಎಸ್‌ಪಿ ಯಿಂದ  ಸ್ಪರ್ಧಿಸಿದ್ದ ಅನಾಮಿಕ ವ್ಯಕ್ತಿ ಜಿ.ಟಿ. ರಂಗಪ್ಪ ಅವರ ಗೆದ್ದು, ನಿಜಲಿಂಗಪ್ಪ ಸೋಲುವಲ್ಲಿ ಜನಸಂಘವು ಕೈಜೋಡಿಸಿತ್ತು.
ನಿಜಲಿಂಗಪ್ಪ ಅವರನ್ನು ಈಗ ಹೋಗಳುವ ಮೋದಿ, ನಿಜಲಿಂಗಪ್ಪ ಅವರನ್ನು ಸೋಲಿಸುವರೊಂದಿಗೆ ತಮ್ಮ ಜನಸಂಘದವರು ಕೈಜೋಡಿಸಿದ್ದು ಎಂಬುದನ್ನು ಮರೆತರೇ ಎಂದು ಕಾಂಗ್ರೆಸ್ ಪ್ರಶ್ನೀಸಿದೆ.
ಇನ್ನೂ ವಿಶ್ವದಲ್ಲಿ ಚಳ್ಳಕೆರೆ ಕುದಾಪುರ ಬಳಿ ಸ್ಥಾಪಿತವಾಗಿರುವ ಡಿಆರ್‌ಡಿಒ, ಐಎಸ್‌ಎಸ್‌ಸಿ ನಮ್ಮ ಸರ್ಕಾರ ಸಾಧನೆ ಎಂದು ಹೇಳಿದ್ದಾರೆ. ಆದರೆ, ಇದು ಯುಪಿಎ ಸರ್ಕಾರದ ಅವಧಿಯಲ್ಲಿ ಕುದಾಪುರ ಬಳಿ ೧೦ ಸಾ”ರ ಎಕರೆ ಜಾಗದಲ್ಲಿ ಸ್ಥಾಪನೆಗೆ ಮಂಜೂರಾಗಿದ್ದು. ಈ ವೇಳೆ ಡಿಆರ್‌ಡಿಒ, ಐಎಸ್‌ಎಸ್‌ಸಿ ನಮ್ಮ ಜಿಲ್ಲೆಂದ ಹೊರ ಹೋಗಲಿ ಎಂದು ಹೋರಾಟದಲ್ಲಿ ಬಿಜೆಪಿಗರು ಎಂಬುದನ್ನು ಮರೆತರೇ ಎಂದು ಕಾಂಗ್ರೆಸ್ ಪ್ರಶ್ನೀಸಿದೆ.