ಚಿತ್ರದುರ್ಗ: ಬಿಜೆಪಿ ಈ ಬಾರಿ ಹೇಗಾದರೂ ಮಾಡಿ 150 ಮಿಶನ್ ದಾಟ ಬೇಕೆಂಬ ಉದ್ದೇಶದಿಂದ ಗೆಲ್ಲುವ  ಅಭ್ಯರ್ಥಿಗಳ ಹುಡುಕಾಟ. ಹಾಗೇನೇ ಹಾಲಿ ಇರುವ ಅಭ್ಯರ್ಥಿಗಳ ಪಟ್ಟಯಲ್ಲಿರುವ  ಕೆಲವರನ್ನು ಕ್ಷೇತ್ರ ಬದಲಾವಣೆ ಮಾಡಲು ಪಕ್ಷ ಮುಂದಾಗಿದೆಯಂತೆ.!

ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ದುರ್ಗದ ಜಿಲ್ಲೆಯಲ್ಲಿರುವ ಮೂರು ಮಠಗಳಿಗೆ ಭೇಟಿ ನೀಡಿ ಕೆಲ  ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ದುರ್ಗದ ಜಿಲ್ಲೆಯಲ್ಲಿ  ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೊಸ ತಂತ್ರ ರೂಪಿಸಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ

ಜಿಲ್ಲೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಹೊಸದುರ್ಗ ಹಾಗೂ ಹೊಳಲ್ಕೆರೆಗೆ  ಇಬ್ಬರಿಗೆ ಟಿಕೆಟ್ ನೀಡುವ ಬದಲು ಒಬ್ಬರಿಗೆ ಟಿಕೆಟ್ ನೀಡಲು ಆಲೋಚಿಸಿದ್ದಾರಂತೆ ಅದರಲ್ಲೂ ಹೊಳಲ್ಕೆರೆಯಲ್ಲಿ ಚಂದ್ರಪ್ಪರಿಗೆ ಬದಲು ಶಶಿಶೇಖರ ನಾಯ್ಕ ಅವರಿಗೆ ಟಿಕೆಟ್ ನೀಡಿದರೆ, ಲಂಬಾಣಿ ಸಮುದಾಯವರನ್ನು ಸಂತೈಸಿದಂತ್ತಾಗುತ್ತದೆ. ಹಾಗೇ ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪಾರೆಡ್ಡಿಯವರನ್ನು ಹಿರಿಯೂರು ಕ್ಷೇತ್ರಕ್ಕೆ ಕಳುಹಿಸಿದರೆ, ದುರ್ಗದ ಕ್ಷೇತ್ರಕ್ಕೆ ದಾವಣೆಗೆರೆ ಸಂಸದ ಜಿ.ಎಂ.ಸಿದ್ಧೇಶ್ವರ್ ಮಗ ಅಮಿತ್ ಗೆ ಟಿಕೆಟ್ ನೀಡಿದರೆ, ಇತ್ತ ಜಿಲ್ಲೆಯಲ್ಲಿ ಲಿಂಗಾಯಿತ ಮತಗಳನ್ನು ಸಳೆಯುವಲ್ಲಿ ಮುಂದಾಗಬಹುದೆಂಬ ಲೆಕ್ಕಾಚಾರ.

ಹಾಗೇ ತಿಪ್ಪಾರೆಡ್ಡಿಯವರು ಹಿರಿಯೂರು ಕ್ಷೇತ್ರಕ್ಕೆ ಹೋದರೆ, ಈ ಗಾಗಲೇ ಪಕ್ಷದ ಪರವಾಗಿ ಕೆಲಸಮಾಡಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಬೆಂಗಳೂರಿನಲ್ಲಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಟಿಕೆಟ್ ನೀಡುತ್ತಾರಂತೆ ಪೂರ್ಣಿಮಾ ಶ್ರೀನಿವಾಸ್ ಅವರು ತಿಪ್ಪಾರೆಡ್ಡಿಯವರ ಪರವಾಗಿ ಕೆಲಸ ಮಾಡಬೇಕೆಂದು ಹೇಳಿದ್ದಾರಂತೆ. ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.

ಆದ್ರೆ ನಾಮ ಪತ್ರ ಸಲ್ಲಿಸುವ ತನಕ ಇಂತಹ ಸುದ್ದಿಗಳು ಹರಿದಾಡುವುದು ಸಹಜ ಎಂಬ ಮಾತನ್ನು ಅಲ್ಲೆಗೆಳೆಯುವಂತ್ತಿಲ್ಲ.!