ಯಾದಗಿರಿ : ನಿನ್ನೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಮಾಧ್ಯಮದರ ಮುಂದೆ ನಾನೇನು ದುಡ್ಡಿನ ಗಿಡ ನೆಟ್ಟಿದ್ದೀನಾ ಎಂಬ ಮಾತಿಗೆ ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು  ದುಡ್ಡಿನ ಗಿಡ ಮಾತನಾಡುವ ನೀವು ಪ್ರಣಾಳಿಕೆ ಘೋಷಣೆ ಮಾಡುವ ಮುನ್ನ ಇದು ಗೊತ್ತಿರಲಿಲ್ಲವೆ ಎಂದು ಹೇಳಿದ್ದಾರೆ.

ರೈತರ ಸಾಲ ಮನ್ನಾ ಮಾಡಿ ಎರಡು ತಿಂಗಳು ಕಳೆದ್ರೂ ಇನ್ನೂ ಆ ಹಣ ಬ್ಯಾಂಕ್ ಸೇರಿಲ್ಲ. ಇನ್ನೂ ರಾಷ್ಟ್ರೀಕೃತ ಬ್ಯಾಂಕಿನ ಹಣದ ಬಗ್ಗೆ ಏನು ಮಾಡುತ್ತಾರೋ ಕಾದು ನೋಡಬೇಕು. ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆಯೇ ಒಂದು ದಂಧೆಯಾಗಿ ನಡೆಯುತ್ತಿದೆ ಎಂದು ಹೇಳಿದರು.