ನವದೆಹಲಿ : ಬ್ಯಾಂಕ್ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಸಿಹಿಸುದ್ದಿ. ಬ್ಯಾಂಕ್ ಸಿಬ್ಬಂದಿಗೆ ಶೇ. 15 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ.

ಬ್ಯಾಂಕ್ ಯೂನಿಯನ್ಸ್ ಮತ್ತು ಭಾರತೀಯ ಬ್ಯಾಂಕುಗಳು ಒಕ್ಕೂಟದ ನಡುವೆ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಶೇ. 15 ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಒಟ್ಟು 29 ಬ್ಯಾಂಕ್ ಗಳ 5 ಲಕ್ಷ ಸಿಬ್ಬಂದಿಗೆ ಈ ವೇತನ ಹೆಚ್ಚಳದಿಂದ ಅನುಕೂಲವಾಗಲಿದೆ. ಈ ತಿಂಗಳಲ್ಲೇ ಸಿಬ್ಬಂದಿಗೆ ಪರಿಷ್ಕೃತ ವೇತನ ಮತ್ತು ಅರಿಯರ್ಸ್ ಸಿಗಲಿದೆ.