ಹೈದರಾಬಾದ್: ಎನ್ಕೌಂಟರ್ ಪ್ರಕರಣಕ್ಕೆ ಹೊಸತಿರುವು.

 

ದಿಶಾ ಹತ್ಯೆ ಪ್ರಕರಣದ ಆರೋಪಿಗಳ ಎನ್ಕೌಂಟರ್ ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್, ಡಿ.9 ರವರೆಗೆ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸದಂತೆ ಸೂಚಿಸಿದೆ.

ಇತ್ತ ಕೇಂದ್ರ ಸರ್ಕಾರ ಪ್ರಕರಣದ ಸಂಪೂರ್ಣ ವರದಿ ಕೇಳಿದೆ. ಇನ್ನು ಎನ್ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಜೆಐ, ಎನ್ಎಚ್ಆರ್ ಸಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಇಂದು ಎನ್ಎಚ್ಆರ್ ಸಿ ತಂಡ ಹೈದರಾಬಾದ್ ಗೆ ಭೇಟಿ ನೀಡಲಿದ್ದು, ಎನ್ಕೌಂಟರ್ ನಡೆದ ಸ್ಥಳ ಮತ್ತು ಆಸ್ಪತ್ರೆಯಲ್ಲಿರುವ ಮೃತದೇಹಗಳ ಪರಿಶೀಲನೆ ನಡೆಸಲಿದೆ.