ಬೆಂಗಳೂರು: ದಂಗೆ ಪದದ ಅರ್ಥ ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ಲ ಅಂತಾ ಕಾಣ್ಸುತ್ತೆ. ದಂಗೆ ಪದದ ಅರ್ಥವನ್ನು ಕುಮಾರಸ್ವಾಮಿ ಡಿಕ್ಷನರಿ ತೆಗೆದು ನೋಡಲಿ ಎಂದು ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ದಂಗೆ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಸ್ಥಾನದಲ್ಲಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ನಕ್ಸಲ್ ರೀತಿಯಾಗಿ ಹೇಳಿಕೆ ನೀಡಿದ್ದಾರೆ.

 ಸರ್ಕಾರ ಇರುತ್ತೋ ಹೋಗುತ್ತೋ ಅನ್ನೋದು ಸ್ವತಃ ಸಿಎಂ ಹಚ್ಡಿಕೆಗೆ ಗೊತ್ತಿಲ್ಲ. ಸರ್ಕಾರದ ಮಂತ್ರಿಗಳು ಭಿನ್ನಮತ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂತ್ರಿಗಿರಿ ಮಾಡದೇ ಇದ್ರೆ ಶಾಸಕರು ಸರ್ಕಾರ ಕೆಡುವುದಾಗಿ ಹೇಳ್ತಾರೆ. ಸಿಎಂಗೆ ತಾಕತ್ತಿದ್ದರೆ ಭಿನ್ನ ಮಂತ್ರಿಗಳು ಮತ್ತು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.