ಬೆಂಗಳೂರು: ನಿಮಗೆ ನಟಿ ರಾಗಿಣಿ ಗೊತ್ತಿರ ಬೇಕಲ್ಲಾ. ಯಾರು ಅಂತ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ. ತುಪ್ಪ ಬೇಕೆ ತುಪ್ಪಾ ಬಿಸಿ ಬಿಸಿ ತುಪ್ಪಾ ಅಂತ ಹಾಡು ಹೇಳುತ್ತಾ ಪಡ್ಡೆಹುಡುಗರ ಮನಸ್ಸು ಗೆದಿದ್ದ ರಾಗಿಣಿ ಯ ಹಾಲಿ ಮತ್ತು ಮಾಜಿ ಗೆಳಯರ ನಡುವೆ ಮಾರಾಮಾರಿ ಆದ ಘಟನೆ ನಡೆದಿದೆ.

.ಈ ಹಿಂದೆ ಗಣಿ ಉದ್ಯಮಿ ಶಿವ ಪ್ರಕಾಶ್ ಎಂಬವರ ಜೊತೆ ರಾಗಿಣಿ ಆತ್ಮೀಯರಾಗಿದ್ದು, ಆದರೆ ಕಳೆದ ಕೆಲ ದಿನಗಳಿಂದ ಆರ್.ಟಿ.ಓ. ಅಧಿಕಾರಿ ರವಿಶಂಕರ್ ಎಂಬವರ ಜೊತೆ ಸಲುಗೆಯಿಂದಿದ್ದರು. ಅಲ್ಲದೆ ಶಿವ ಪ್ರಕಾಶ್ ಅವರನ್ನು ನಿರ್ಲಕ್ಷಿಸತೊಡಗಿದ್ದರೆಂದು ಹೇಳಲಾಗಿದೆ.

ಇತ್ತೀಚೆಗೆ ರಾಗಿಣಿ ತಮ್ಮ ಹಾಲಿ ಗೆಳೆಯ ರವಿಶಂಕರ್ ಜೊತೆ ರಿಡ್ಜ್ ಕಾರ್ಟನ್ ಹೋಟೆಲ್ ಗೆ ಊಟಕ್ಕೆಂದು ತೆರಳಿದ್ದಾರೆ. ಇದೇ ಹೋಟೆಲ್ ನಲ್ಲಿ ರಾಗಿಣಿಯವರ ಮಾಜಿ ಗೆಳೆಯ ಶಿವಪ್ರಕಾಶ್ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರೆಂದು ಹೇಳಲಾಗಿದೆ.

ರಾಗಿಣಿ ಜೊತೆ ರವಿಶಂಕರ್ ಅವರನ್ನು ನೋಡುತ್ತಿದ್ದಂತೆ ಶಿವಪ್ರಕಾಶ್ ಅವರ ಸಿಟ್ಟು ನೆತ್ತಿಗೇರಿದೆ. ಇನ್ನು ಮುಂದೆ ರಾಗಿಣಿ ಜೊತೆ ಓಡಾಡದಂತೆ ರವಿಶಂಕರ್ ಅವರಿಗೆ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆ ಬಳಿಕ ಬಿಯರ್ ಬಾಟಲ್ ನಿಂದ ರವಿಶಂಕರ್ ಅವರ ತಲೆಗೆ ಹೊಡೆದಿದ್ದು, ಈ ಸಂಬಂಧ ಈಗ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗೆದ ಅಪ್ಪ ತುಪ್ಪಾ ಬೇಕಾ ತುಪ್ಪದ ಹುಡುಗಿಯ ಕಥೆ.!