ತಿರುಪತಿ : ನಾಳೆಯಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಆಂಧ್ರಪ್ರದೇಶದ 13 ಜಿಲ್ಲಾ ಕೇಂದ್ರಗಳಲ್ಲಿ ತಿರುಪತಿ ಲಡ್ಡು ಮಾರಾಟ ಮಾಡಲು ಟಿಟಿಡಿ ಮುಂದಾಗಿದೆ.

ಟಿಟಿಡಿ ಅಧಿಕಾರಿಗಳು. ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ ಹಾಗೂ ಮಾಹಿತಿ ಕೇಂದ್ರಗಳಲ್ಲಿ ಶೇ. 50 ರಿಯಾಯಿತಿ ದರದಲ್ಲಿ ಲಡ್ಡುಗಳು ದೊರೆಯಲಿವೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಭಕ್ತರಿಗೆ 1000 ಕ್ಕಿಂತಲೂ ಹೆಚ್ಚು ಲಡ್ಡು ಅವಶ್ಯಕತೆ ಇದ್ದಲ್ಲಿ ಭಕ್ತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಯಾವ ಕಾರಣಕ್ಕಾಗಿ ಪ್ರಸಾದವನ್ನು ಪಡೆಯಲು ಬಳಸುತ್ತಿದ್ದೀರಿ ಎಂಬ ಮಾಹಿತಿಯನ್ನು ಐದು ದಿನಗಳಿಗೆ ಮುಂಚೆ tmlbulkladdus@gmail.com ಇ-ಮೇಲ್ ಮಾಡುವಂತೆ ಸೂಚನೆ ನೀಡಿದೆ.