ತಿರುಪತಿ :  ಟಿಟಿಡಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ದೇವಸ್ಥಾನವನ್ನು ಬಂದ್ ಮಾಡುತ್ತಿಲ್ಲ ಎಂಬುದಾಗಿ ರಮಣ ದೀಕ್ಷಿತಲು ಟ್ವಿಟ್ ನಲ್ಲಿ ಕಿಡಿಕಾರಿದ್ದರು. ಇದರ ಬೆನ್ನಲ್ಲೇ.. ತಿರುಪತಿ ತಿಮ್ಮಪ್ಪನ ದರ್ಶನವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ.

ಈ ಕುರಿತಂತೆ ಇಂದು ಸಂಜೆ ಟಿಟಿಡಿಯಿಂದ ಅಧಿಕೃತ ಆದೇಶ ಹೊರಡಿಸಲಿದ್ದು, ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ತಿಮ್ಮಪ್ಪನ ದೇವಾಲಯವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವವರಿಗೂ ಕೊರೋನಾ ಸೋಂಕಿತ ಅರ್ಚಕರಿಂದ ಮತ್ತಷ್ಟು ಭಕ್ತಾಧಿಗಳಿಗೆ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸಲಿದೆ.