ಚಿತ್ರದುರ್ಗ : ನಾಯಕನಹಟ್ಟಿ ತಿಪ್ಪೇರುದ್ರೇಸ್ವಾಮಿ ಮುಕ್ತಿ ಬಾವುಟ ಈ ಬಾರಿ 72 ಲಕ್ಷಕ್ಕೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಬೆಂಗಳೂರು ಮೂಲದ ಉದ್ಯಮಿ ಹಾಗೂ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಮುಖೇಶ್ ಬಾವುಟವನ್ನು ಹರಾಜಿನಲ್ಲಿ ಪಡೆದರು.

ಇದೇ ಮೊದಲ ಬಾರಿಗೆ 72 ಲಕ್ಷಕ್ಕೆ ಬಾವುಟ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದೆ. ಕಳೆದ ಬಾರಿ ಮೈಸೂರು ಮೂಲದ ಉದ್ಯಮಿ ಎಲ್. ಸೋಮಣ್ಣ 71 ಲಕ್ಷಕ್ಕೆ ಬಾವುಟ ಪಡೆದಿದ್ದರು.