ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಲಕ್ಮೀಪತಿ ಹೆಸರಲ್ಲಿ ಆರು ನಿವೇಶನ ಹಾಗೂ ಒಂದು ಮನೆ ಇದೆ ಎಂದು ಬೆಂಗಳೂರಿನ ಎಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳು27 ರಂದು ಎಸಿಬಿ ಅಧಿಕಾರಿಗಳು ರೇಡ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ಕಚೇರಿ ಮತ್ತು ಮನೆಗಳ ಮೇಲೆ ದಾಳಿಮಾಡಿದಾಗ ಆದಾಯಕ್ಕೂ ಮೀರಿ ಆಸ್ತಿಹೊಂದಿರುವ ಆಕ್ರಮ ಆಸ್ತಿಯನ್ನು ಪಟ್ಟಿಮಾಡಿದ್ದಾರೆ. ಚಳ್ಳಕೆರೆಯಲ್ಲಿ ಒಂದು ವಾಸದ ಮನೆ, ವಿವಿಧ ಸರ್ವೆ ನಂಬರನಲ್ಲಿ 15.14 ಎಕೆರೆ ಕೃಷಿ ಜಮೀನು, 332 ಗ್ರಾಂ ಬಂಗಾರ, 897 ಗ್ರಾಂ ಬೆಳ್ಳಿ, ಒಂದು ಓಮ್ನಿ ಕಾರು, ಮೂರು ಕಾರು, ಒಂದು ಟ್ರ್ಯಾಕ್ಟರ್, ಒಂದು ಟ್ರೇಲರ್, ಮೂರು ದ್ವಿಚಕ್ರವಾಹನ, 1.13 ಲಕ್ಷ ನಗದು ಹಾಗೂ ಬ್ಯಾಂಕ್ ಠೇವಣಿ 58 ಸಾವಿರ ಎಂದು ಬೆಂಗಳೂರಿನ ಎಸಿಬಿ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.