ಬಳ್ಳಾರಿ : ತಾಕತ್ತು ಇದ್ದರೆ ಪಕ್ಷೇತರ ಅಭ್ಯರ್ಥಿ ಆಗಿ ಗೆಲಲ್ಲಲಿ ಎಂದು ಸಂಸದ ಶ್ರೀರಾಮುಲು ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿಗೆ ಸವಲಾ್ ಹಾಕಿದ್ದಾರೆ.

ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರು ಈ ಹಿಂದೆ ನನ್ನಿಂದ ಗೆದ್ದಿಲ್ಲ ಅಂತ ಹೇಳಿದ್ದಾರೆ. ಆದ್ರೆ ಈ ಬಾರಿ ಚುನಾವಣೆಯಲ್ಲಿ ನನ್ನ ವಿರುದ್ಧ ಪಕ್ಷೇತರ ಅಭ್ಯರ್ಥಿ ನಿಲ್ಲಲಿ ಎಂದು . ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾದ್ದಾರೆ.

ನಿನ್ನೆ ನಾಯಕನಹಟ್ಟಿಯಲ್ಲಿ ನಡೆದ ಘಟನೆ ನನಗೆ ಮತ್ತು ನಮ್ಮ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಿನ್ನೆಯ ಘಟನೆಯಲ್ಲಿ ನನ್ನ ಕಾರು ಜಖಂ ಆಗಿದೆ. ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ ಅಷ್ಟೇ, ನನ್ನ ಶರ್ಟ್ ಹರಿದು ಹಲ್ಲೆ ಮಾಡಿದ್ದಾರೆ ಎನ್ನುವುದು ಸುಳ್ಳು ವದಂತಿ ಎಂದು ಹೇಳಿದ್ದಾರೆ.