ಹೈದರಬಾದ್: ಹೈದರಾಬಾದ್‌ನ ರಂಗರೆಡ್ಡಿ ಜಿಲ್ಲೆಯಲ್ಲಿ ತಹಶೀಲ್ದಾರ್ ಅವರನ್ನು ಜೀವಂತವಾಗಿ ಸುಡಲಾಗಿದೆ.!  ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುರೇಶ್ ಎನ್ನುವ ಆರೋಪಿ ತಹಶೀಲ್ದಾರ  ವಿಜಯ ರೆಡ್ಡಿ ಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಅಬ್ದುಲ್ಲಾಪುರ್ಮೆಟ್‌ನಲ್ಲಿರುವ ವಿಜಯ ರೆಡ್ಡಿ ಅವರ ಕೋಣೆಗೆ ಪ್ರವೇಶಿಸಿದ ಸುರೇಶ್‌ಗೆ ಮೃತ ವಿಜಯ ಆಕೆ ಸ್ವಲ್ಪ ಕೆಲಸವಿದೆ ಎಂದು ಹೇಳಿದ್ದಾಳೆ. ವ್ಯಕ್ತಿಯು ಪಾಸ್ ಪುಸ್ತಕದೊಂದಿಗೆ ಕಚೇರಿಯಲ್ಲಿ ಅರ್ಧ ಘಂಟೆಯವರೆಗೆ ತನಕ ಕಾಯುತ್ತ ಕುಳಿತುಕೊಂಡಿದ್ದಾನೆ. ಆದರೆ ಕೊನೆಗೆ ಹಲ್ಲೆಕೋರನು ವಿಜಯ ರೆಡ್ಡಿ ಮೇಲೆ ಸೀಮೆಎಣ್ಣೆ ಡಬ್ಬವನ್ನು ಖಾಲಿ ಮಾಡಿ ಅವಳಿಗೆ ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ತನ್ನ ರಕ್ಷಣೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದಲ್ಲದೇ ವಿಜಯ ರೆಡ್ಡಿ ಅವರನ್ನು ಉಳಿಸಲು ಯತ್ನಿಸಿದ ಇಬ್ಬರು ಕಚೇರಿ ಸಿಬ್ಬಂದಿಗಳಿಗೂ ಸುಟ್ಟ ಗಾಯಗಳಾಗಿವೆಯಂತೆ.!

ವಿಜಯ ರೆಡ್ಡಿ ಅವರ ಶವವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದ್ದು ಆರೋಪಿ ಸುರೇಶ್‌ ಅವರನ್ನು ಬಂಧಿಸಲಾಗಿದೆ.