ಬೆಂಗಳೂರು: ರಾಜ್ಯದ ಮೊದಲ ಕಿಸಾನ್ ರೈಲು ಸೇವೆ ಸೆ.19ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನಿಂದ ದೆಹಲಿ ನಡುವೆ ಸಂಚರಿಸಲಿದೆ.

ಈ ರೈಲಲ್ಲಿ ಕೃಷಿ ಉತ್ಪನ್ನಗಳಾದ ಕ್ಯಾಬೇಜ್, ಕ್ಯಾಪ್ಸಿಕಂ,ಮೆಣಸಿನಕಾಯಿ ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬಹುದಾಗಿದೆ. ರೈಲಿನಲ್ಲಿ 10ಕ್ಕೂ ಅಧಿಕ ಸಾಮರ್ಥ್ಯದ ಪಾರ್ಸಲ್ ಬೋಗಿ ಅಳವಡಿಸಲಾಗಿದ್ದು. ಜೊತೆಗೆ 2 ಲಗೇಜ್ ಕಂ ಜನರೇಟರ್ ಬೋಗಿಗಳಿರಲಿವೆ.

ವಿಶೇಷ ರೈಲು ಮೈಸೂರು,ಹಾಸನ, ದಾವಣಗೆರೆ,ಹುಬ್ಬಳ್ಳಿ ಮುಂತಾದ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.!