ಬೆಂಗಳೂರು: ದೋಸ್ತಿ  ಸರ್ಕಾರದಲ್ಲಿ ಸೂಪರ್ ಸಿಎಂ ಅಂತಾ ಕರೆಸಿಕೊಳ್ಳುವ ಸಚಿವ ಹೆಚ್.ಡಿ ರೇವಣ್ಣ ಅವರು ತಮ್ಮ ಖಾತೆ ಅಲ್ಲದ ಮತ್ತೊಂದು ಖಾತೆಗೆ ಕೈ ಆಡಿಸಿದ್ದಕ್ಕೆ ಕಾಂಗ್ರೆಸ್ ನ ಕೆಲವರು ಸಿಡಿಮಿಡಿಗೊಂಡಿದ್ದಾರಂತೆ. ಆಗಿದ್ದಿಷ್ಟು.!

ಗ್ರಾಮೀಣಾಭಿವೃದ್ಧಿ, ಪಂಚಾಯತ್​ರಾಜ್​ ಸಚಿವ ಕೃಷ್ಣ ಭೈರೇಗೌಡ ಅವರ ಖಾತೆಯಲ್ಲಿನ ಪ್ರಮುಖ ಯೋಜನೆಯೊಂದರ ಫೈಲ್ ಕ್ಲಿಯರ್​ ಮಾಡುವಂತೆ ರೇವಣ್ಣ ಒತ್ತಡ ಹಾಕಿ ಆ ಫೈಲ್ ಅನ್ನು ಕ್ಲಿಯರ್ ಮಾಡಿಕೊಡುವಂತೆ ಸಚಿವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ರೇವಣ್ಣ ಸರ್ಕಾರದ ತಮ್ಮದಲ್ಲದ ಖಾತೆಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಿರುವುದು ಕೃಷ್ಣ ಭೈರೇಗೌಡ ಅವರಲ್ಲಿ ಅಸಮಾಧಾನ ಉಂಟು ಮಾಡಿದ್ದು, ಈ ಬಗ್ಗೆ ಡಿಸಿಎಂಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆಯಂತೆ. ಆದ್ರೆ ದೊಸ್ತಿ ಸರಕಾರದಲ್ಲಿ ಇದೆಲ್ಲಾ ಮಾಮೂಲು ಎಂಬುದು ತಿಳಿದಂತವರು ಅಂಬೋಣ.?