ಚಿತ್ರದುರ್ಗ; ಚೀನಾದ ಗಡಿ ಕ್ಯಾತೆ ಮಧ್ಯೆ ಭಾರತೀಯ ವಾಯುಪಡೆಗೆ ಶಕ್ತಿ ತುಂಬುವ ‘ರುಸ್ತುಂ-2’ ಡ್ರೋನ್ ಪರೀಕ್ಷಾರ್ಥ ಪ್ರಯೋಗ ಚಿತ್ರದುರ್ಗದ ಕುದಾಪುರ ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿದೆ.

ರುಸ್ತುಂ-2 ಸ್ವಯಂಚಾಲಿತ ಸಾಮರ್ಥ್ಯ ಹೊಂದಿದ್ದು, ಸಿಂಥೆಟಿಕ್ ಅಪಾರ‍್ಚರ್ ರಾಡಾರ್‌ ಸಂಪರ್ಕ, ತಕ್ಷಣಕ್ಕೆ ಒದಗುವ ಅಪಾಯಗಳಿಂದ ಸ್ವಯಂ ರಕ್ಷಣೆ ಹಾಗೂ ಜಾಗೃತಗೊಳ್ಳುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹಾರಾಟಕ್ಕೆ ತೆರಳಿದಾಗ ವಾಯುನೆಲೆಯಿಂದ ನಿರಂತರ ಸಂಪರ್ಕ ಹೊಂದಿ ಸಂದೇಶ ಕಳುಹಿಸುವ ಕಾರ್ಯಕ್ಷಮತೆ ಹೊಂದಿದೆ.