ಬೆಂಗಳೂರು:  ಇದೇನಪ್ಪ ನಮ್ಮ ದುಡ್ಡು ನಮ್ಮಿಷ್ಟ ಎಷ್ಟು ಬೇಕು ಅಷ್ಟು ಡ್ರಿಂಕ್ಸ್ ಕುಡಿಬಹುದು ಅಂತ ಲೆಕ್ಕಹಾಕಿದರೆ , ನಿಮ್ಮ ಲೆಕ್ಕ ತಪ್ಪು. ಏಕೆಂದ್ರೆ  ಡ್ರಿಂಕ್ಸ್ ನೀತಿಸಂಹಿತೆ ಗೆ ಒಳಪಡುತ್ತದೆ.

ಹಾಗಾಗಿ ಒಬ್ಬ ವ್ಯಕ್ತಿ ದಿನಕ್ಕೆ ಕೇವಲ 750 ಎಂ.ಎಲ್‌. ಮದ್ಯ ಅಥವಾ 3 ಬಾಟಲ್‌ ಬಿಯರ್‌ ಅಷ್ಟೇ ಖರೀದಿ ಮಾಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಪ್ರಮಾಣದ ಬಗ್ಗೆ ಫಲಕ ಹಾಕಲಾಗಿದೆ.

ಆ ಹಿನ್ನೆಲೆಯಲ್ಲಿ ಇಲಾಖೆ ಅಬಕಾರಿ ಡಿ.ಸಿ.ಗಳಿಗೆ ತಮ್ಮ ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ದಾಸ್ತಾನಿಗೆ ಅಥವಾ ಸಾಗಣೆಗೆ ಅವಕಾಶ ಮಾಡಿಕೊಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಲಾಗಿದೆ.