ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬ0ಧಿಸಿ ಇನ್ನೂ ಕೂಡಾ ಮುಂದುವರಿದಿದೆ. ವಾಣಿಜ್ಯ ನಗರಿಯ ಪ್ರಸಿದ್ಧ ಮುಚಾದ್ ಪಾನ್ ವಾಲಾ ರಾಮ್ಕುಮಾರ್ ತಿವಾರಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎನ್ಸಿಬಿ ಮಂಗಳವಾರ ಬಂಧಿಸಿದೆ.
ಸೋಮವಾರ ವಶಪಡಿಸಿಕೊಳ್ಳಲಾಗಿದ್ದ ತಿವಾರಿ ಅವರನ್ನು ಇದೀಗ ಔಪಪಚಾರಿಕವಾಗಿ ಬಂಧಿಸಲಾಗಿದೆ ಎಂದು ಎನ್ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.
ಬಂಧನಕ್ಕೊಳಗಾದ ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ವಿಚಾರಣೆ ವೇಳೆ ರಾಮ್ ಕುಮಾರ್ ತಿವಾರಿ ಹೆಸರು ಕೇಳಿ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಭಾರತದಲ್ಲಿ ನೆಲೆಸಿರುವ ಸಜ್ನಾನಿ, ನಟಿ ದಿಯಾ ಮಿರ್ಜಾ ಮತ್ತು ಅವರ ಸಹೋದರಿಯ ಮಾಜಿ ವ್ಯವಸ್ಥಾಪಕನ ಜೊತೆ ಬಂಧಿತರಾಗಿದ್ದರು.
No comments!
There are no comments yet, but you can be first to comment this article.