ಮು0ಬೈ: ಡ್ರಗ್ಸ್ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಎನ್‌ಸಿಬಿ ಹುಡುಕಾಟ ಇನ್ನೂ ಕೂಡಾ ನಡೆಯುತ್ತ ಇದೆ. ಇದೀಗ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಅಳಿಯನನ್ನು ಮಾದಕ ವಸ್ತು ನಿಯಂತ್ರಣ ಸಂಸ್ಥೆಅಧಿಕಾರಿಗಳು ಬಂಧಿಸಿದ್ದಾರೆ.

ನವಾಬ್ ಮಲಿಕ್ ಅಳಿಯ ಸಮೀರ್ ಖಾನ್‌ರನ್ನು ಬಂಧಿಸಿ, ದಕ್ಷಿಣ ಮುಂಬೈನ ಎನ್‌ಸಿಬಿಯ ಬಲ್ಲಾರ್ಡ್ ಎಸ್ಟೇಟ್ ಕಚೇರಿಯಲ್ಲಿ ಬೆಳಿಗ್ಗೆ ವಿಚಾರಣೆಗೆ ಕರೆಯಲಾಯಿತು.

ಬೆಳಿಗ್ಗೆ 10  ಗಂಟೆಗೆ ಸಮೀರ್ ಖಾನ್ ಕಚೇರಿ ತಲುಪಿದ್ದಾರೆ. ಕೆಲವು ಗಂಟೆಗಳು ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಏಜೆನ್ಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ವಾರ ಬ್ರಿಟಿಷ್ ಮೂಲದ ವ್ಯಕ್ತಿಯೊಬ್ಬನ ಬಂಧನ ಸೇರಿದಂತೆ ಇತರ ಇಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆ ವೇಳೆ ಆತನ ಮತ್ತು ಡ್ರಗ್ಸ್ ಪ್ರಕರಣದ ಆರೋಪಿಗಳ ನಡುವೆ ಆನ್‌ಲೈನ್ ವಹಿವಾ20,000 ರೂಪಾಯಿ ಎಂದು ತಿಳಿದುಬಂದ ನಂತರ ಸಮೀರ್ ಖಾನ್‌ರನ್ನು ಕರೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಮುಂಬೈನ ಪ್ರಸಿದ್ಧ ಮುಚಾದ್ ಪಾನ್ವಾಲಾ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮ್‌ಕುಮಾರ್ ತಿವಾರಿ ಅವರನ್ನು ಎನ್‌ಸಿಬಿ ಮಂಗಳವಾರ ಬಂಧಿಸಿದೆ. ಇನ್ನು ಕಳೆದ ವಾರ ಎನ್‌ಸಿಬಿ ಕರಣ್ ಸಜ್ನಾನಿ ಸೇರಿದಂತೆ ಮೂವರನ್ನು ಬಂಧಿಸಿ ಖಾರ್ ಮತ್ತು ಬಾಂದ್ರಾ ಪ್ರದೇಶಗಳಿಂದ 200 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ