ಬೆಂಗಳೂರು : ಇಂದು ಬೆಳಗ್ಗೆ 6.45 ರ ಸುಮಾರಿಗೆ ಬೆಂಗಳೂರಿನ ಯಲಹಂಕದಲ್ಲಿರುವ ರಾಗಿಣಿ ನಿವಾಸಕ್ಕೆ ಆಗಮಿಸಿದ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಗಿಣಿ ಆಪ್ತ ರವಿಶಂಕರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಗಿಣಿಗೆ ವಿಚಾರಣೆಗೆ ಹಾಜರಾಲು ನೋಟಿಸ್ ನೀಡಿದ್ದರು. ಆದರೆ ರಾಗಿಣಿ ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.

ಡ್ರಗ್ಸ್ ದಂಧೆ ಆರೋಪದ ಮೇಲೆ ಆರ್ ಟಿಓ ಸಿಬ್ಬಂದಿ ರವಿಶಂಕರ್ ಎಂಬಾತನನ್ನು ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಮೇರೆಗೆ ಕಾರ್ತಿಕ್ ರಾಜ್ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.