ಡೈರಿ ನೌಕರನೊಬ್ಬ ಹಾಲಿನ ಕಂಟೇನರ್ ನಲ್ಲಿ ಕುಳಿತು ಮನಸೋ ಇಚ್ಛೆ ಹಾಲಿನ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ಟರ್ಕಿಯಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯ ಕ್ಷೀರ ಮಜ್ಜನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಟರ್ಕಿಯ ಕೋನ್ಯಾದ ಸೆಂಟ್ರಲ್ ಆಂಟೊಲಿಯನ್ ಪ್ರಾಂತದ ಹಾಲಿನ ಡೈರಿಯಲ್ಲಿ ಅಲ್ಲಿಯ ನೌಕರ ಎಮ್ರಿ ಸಾಯರ್ ಹೀಗೆ ಹಾಲಿನಲ್ಲಿ ಸ್ನಾನ ಮಾಡಿಕೊಂಡಿದ್ದಾನೆ. ಇನ್ನೊಬ್ಬ ನೌಕರ ಇದನ್ನು ವಿಡಿಯೋ ಶೂಟ್ ಮಾಡಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಡೈರಿ ನೌಕರನನ್ನು ಬಂಧಿಸಿದ್ದಾರೆ.

ಇದೀಗ ನೌಕರ ಹಾಗೂ ವಿಡಿಯೋ ಶೂಟ್ ಮಾಡಿದ ಸಿಬ್ಬಂದಿ ಇಬ್ಬರನ್ನೂ ಡೈರಿ ವಜಾಗೊಳಿಸಿದ್ದು, ಎಮ್ರಿ ಹಾಲಿನಲ್ಲಿ ಸ್ನಾನ ಮಾಡಿಲ್ಲ, ಅದು ನೀರು ಹಾಗೂ ಕ್ಲೀನಿಂಗ್ ಫ್ಲೂಡ್ ಮಿಶ್ರಣ. ಕಂಪನಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ ಎಂದು ಡೈರಿ ಪ್ಲಾಂಟ್ ತಿಳಿಸಿದೆ.