ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದು, ಈ ವೇಳೆ ಡಿಕೆಶಿ ಅವರ ಆಸ್ತಿ ಕೇವಲ 2013-18 ರ 5 ವರ್ಷದ ಅವಧಿಯಲ್ಲಿ ಶೇ. 380 ಹೆಚ್ಚಳವಾಗಿರುವುದಾಗಿ ಎಫ್ ಐಆರ್ ನಿಂದ ತಿಳಿದುಬಂದಿದೆ.

ಡಿ.ಕೆ.ಶಿವಕುಮಾರ್ ಅವರು 2013 ರ ಏಪ್ರಿಲ್ 13 ರಂದು ಚುನಾವಣೆ ಅಫಿಡವಿಟ್ ಸಲ್ಲಿಸುವ ವೇಳೆ 33.92 ಕೋಟಿ ರೂ. ಇದ್ದ ಆಸ್ತಿಯು 2018 ರ ಏಪ್ರಿಲ್ 30 ಕ್ಕೆ 162.53 ಕೋಟಿ ರೂ. ಗೆ ಹೆಚ್ಚಳವಾಗಿದೆ. 2013-18 ರ 5 ವರ್ಷದ ಅವಧಿಯಲ್ಲಿ ಒಟ್ಟು 128.60 ಕೋಟಿ ರೂ. ಆಸ್ತಿ ಪ್ರಮಾಣ ಹೆಚ್ಚಿದೆ. ಈ ಅವಧಿಯಲ್ಲಿ 166.79 ಕೋಟಿ ರೂ. ಆದಾಯ ಹೊಂದಿದ್ದು, 113.12 ಕೋಟಿ ರೂ. ಖರ್ಚು ಮಾಡಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಘೋಷಿತ ಆದಾಯಕ್ಕಿಂತ 74.93 ಕೋಟಿ ರೂ. ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಸಿಬಿಐ ಅಧಿಕಾರಿಗಳು ಪಿಸಿ ಕಾಯ್ದೆ 1988 ರ ಅಡಿ 13(1), 13(1) ಸೆಕ್ಷನ್ ನಡಿ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು, ಸೆಕ್ಷನ್ 13(2) ಪ್ರಕಾರ 1 ವರ್ಷಕ್ಕೆ ಕಡಿಮೆ ಇಲ್ಲದಂತೆ ಗರಿಷ್ಠ 7 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.