ಚಿಕ್ಕಮಗಳೂರು: ಕಡೂರಿನಿಂದ ಹೊಸದುರ್ಗದ ಕಡೆ ಹೋಗುವ ವಾಗ ಗಿರಿಯಾಪುರದ ಗ್ರಾಮದ ಬಳಿ ಡಿಸೈಲ್ ಟ್ಯಾಂಕರ್ ಪಲ್ಟಿ ಆದ ಪರಿಣಾಮ ಸ್ಥಳದಲ್ಲಿ ಓರ್ವ ಸಜೀವದಹನವಾದ ಘಟನೆ ನಡೆದಿದೆ.

ಇದ್ದಕ್ಕಿದ್ದಂತೆ ಟ್ಯಾಂಕರ್ ಪಲ್ಟಿ ಆಗಿದ್ದರಿಂದ ಡಿಸೈಲ್ ರಸ್ತೆ ಮೇಲೆಲ್ಲಾ ಚೆಲ್ಲಿ ತಕ್ಷಣ ಬೆಂಕಿ ಹತ್ತಿಕೊಂಡಿದೆ. ದಟ್ಟವಾದ ಹೊಗೆ ವ್ಯಾಪಿಸಿದ್ದು ಪಲ್ಟಿ ಆದ ಜಾಗದಲ್ಲಿಯೇ ಇರುವ 5-6 ಮನೆಯ ಸುತ್ತಲೂ ಹೊಗೆ ಆವರಿಸಿದ್ದು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಮುಂದಾಗಿದ್ದರೂ ಸಹ ದಟ್ಟವಾದ ಹೊಗೆ ಆವರಸಿದೆ ಎಂದು ತಿಳಿದುಬಂದಿದೆ.

( ಸಾಂದರ್ಭಿಕ ಚಿತ್ರ)