ಬೆಂಗಳೂರು : ರಾಜ್ಯದಲ್ಲಿ 4 ಕೋಟಿ 99 ಲಕ್ಷಕ್ಕೂ ಅಧಿಕ ಮಂದಿ ಪಡಿತರ ಚೀಟಿ ಸದಸ್ಯರಿದ್ದು , ಇದರಲ್ಲಿ ಅನರ್ಹರನ್ನು ಪತ್ತೆ ಹಚ್ಚುವ ಸಲುವಾಗಿ ಡಿಸೆಂಬರ್ ಮತ್ತು ಜನವರಿಯ ಮೊದಲ ಹತ್ತು ದಿನಗಳ ಕಾಲ ಗ್ರಾಹಕರಿಂದ ಇ – ಕೆವೈಸಿ ಪಡೆಯಲು ಆಹಾರ ಇಲಾಖೆ ಸಜ್ಜಾಗಿದೆ .

ಮದುವೆಯಾದವರು, ವಲಸೆ ಹೋದವರು, ಮೃತಪಟ್ಟವರ ಹೆಸರಿನಲ್ಲಿಯೂ ಮತ್ತು ಎರಡೂ ಕಡೆ ಕಾರ್ಡ್ ಪಡೆದುಕೊಂಡವರು, ಬೋಗಸ್ ಕಾರ್ಡುದಾರರು ಇರುವುದರಿಂದ ಭಾರಿ ಪ್ರಮಾಣದಲ್ಲಿ ಪಡಿತರ ಹಂಚಿಕೆಯಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಮತ್ತು ಜನವರಿ 1 ರಿಂದ 10 ರ ವರೆಗೆ ನ್ಯಾಯಬೆಲೆ ಅಂಗಡಿ ಮುಚ್ಚದೇ ಇ ಕೆವೈಸಿ ಆಧಾರ್ ಲಿಂಕ್ ಮಾಡಿಸಬೇಕಿದೆ.

ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ಬೆರಳಚ್ಚು ನೀಡಿ ಇ ಕೈವೆಸಿ ಅಪ್ಡೇಟ್ ಮಾಡಿಸಬೇಕಿದೆ. ಹಾಗಾಗಿ  ಡಿಸೆಂಬರ್ ಮತ್ತು ಜನವರಿಯಲ್ಲಿ 10 ದಿನ ಪಡಿತರ ವಿತರಣೆ ಬಂದ್ ಆಗಲಿದೆ. ತಿಂಗಳ ಮೊದಲ ವಾರದ ಬದಲಿಗೆ ಕೊನೆಯ ವಾರ ಪಡಿತರ ನೀಡಲಾಗುವುದು ಎಂದು ಹೇಳಿದೆ.!