ಯಾದಗಿರಿ: ಜಿಲ್ಲಾ ಪಂಚಾಯಿತಿಯ ವಿಪಕ್ಷ ನಾಯಕ ಹಾಗೂ ಶಾಸಕ ರಾಜುಗೌಡನ ಪರಮಾಪ್ತ ಯಾದಗಿರಿ ಮರಿಲಿಂಗಪ್ಪ ಅವರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಇಂದು ಯಾದಗಿರಿಯ ಡಿಸಿ ಕಚೇರಿ ಬಳಿ ನಡೆದಿದೆ.

ಮರಿಲಿಂಗಪ್ಪ ಇಂದು ಬೆಳಗ್ಗೆ ಜೆಡಿಎಸ್‌ ಮುಖಂಡ ಹನುಮೇಗೌಡರ‌ ಮನೆಗೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲವಾರ್‌, ಮಚ್ಚುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣ ಮರಿಲಿಂಗಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.