ತುಮಕೂರು: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಆರ್ ಟಿ ಓ ಇನ್ಸ್ ಪೇಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಬಳಿ ನಡೆದಿದೆ.

ಮೃತ ದುರ್ದೈವಿ ಚಿತ್ರದುರ್ಗದ ಆರ್ ಟಿ ಓ ಇನ್ಸ್ ಪೇಕ್ಟರ್ ದೇವರಾಜು (50 ) ಎಂದು ತಿಳಿದುಬಂದಿದೆ.

ಮುಂಜಾನೆ ಶಿರಾಗೆ ಆಗಮಿಸಿ ವಾಪಸ್ ದುರ್ಗಕ್ಕೆ ಬರುವಾಗ  ಈ ಘಟನೆನಡೆದಿದ್ದು, ಕಾರು ಚಾಲಕ ಅಶೋಕನಿಗೆ ಗಂಭೀರ ಗಾಯಗಳಾಗಿ  ಶಿರಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ..