ಬೆಂಗಳೂರು: ಡಿಕೆಶಿ ಪರ ಒಕ್ಕಲಿಗರು ನಡೆಸಿದ ಪ್ರತಿಭಟನೆಗೆ ದೇವೇಗೌಡರ ಕುಟುಂಬದವರು ಯಾರು ಪಾಲ್ಗೊಳ್ಳಲಿಲ್ಲ ಎಂಬ ಮಾತು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದೇವೇಗೌಡರು ಈ ರೀತಿಯಾಗಿ ಹೇಳಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ದೇವೇಗೌಡರು,  ಡಿಕೆಶಿ ಬೆನ್ನಿಗೆ ಯಾವಾಗ ನಿಲ್ಲಬೇಕು ಎಂದು ನಮಗೆ ಗೊತ್ತಿದೆ. ನಿನ್ನೆಯ ಪ್ರತಿಭಟನೆಗೆ ಆಹ್ವಾನ ಬಂದಿತ್ತು. ಆದರೆ, ಮಾಜಿ ಪಿಎಂ ಆಗಿದ್ದರಿಂದ ಹೋಗಿಲ್ಲ. ಎಚ್ಡಿಕೆ ಡಿಕೆಶಿಯವರ ತಾಯಿಗೆ ಧೈರ್ಯ ಹೇಳಿದ್ದು, ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಪ್ರತಿಭಟನೆಗೆ ಹೋಗಲಿಲ್ಲ ಎಂಬುದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.!