ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಅವರ ಕಚೇರಿ ಮತ್ತು ನಿವಾಸದ ಮೇಲೆ ಈ ಹಿಂದೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದವೇಳೆ  ಜಮೀನು ಮತ್ತು ಕಟ್ಟಡದ ರೂಪದಲ್ಲಿದ್ದ 74 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಅಷ್ಟೂ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರಂತೆ.! ಸಚಿವರು ಸುಮಾರು 500 ಕೋಟಿ ರೂ.ಗೂ ಮೀರಿದ ಬೇನಾಮಿ ಆಸ್ತಿ ಮಾಡಿರುವ ಶಂಕೆ ಇದ್ದು, ಈ ಸಂಬಂಧ ದೆಹಲಿ ನ್ಯಾಯಾಲಯವು ಈಗಾಗಲೇ ವಿಚಾರಣೆ ನಡೆಸುತ್ತಿದ್ದು, ಡಿಕೆಶಿಯ 74 ಕೋಟಿ ರೂ.ನ ಬೇನಾಮಿ ಆಸ್ತಿ ಜಪ್ತಿಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.!