ಚಿತ್ರದುರ್ಗ: ಇತ್ತೀಚೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೇರಿ ಕುಂಚಿಟಿಗ ಕುಲಗುರುಗಳೂ, ಶ್ರಮಜೀವಿಗಳೂ, ಕರ್ಮಯೋಗಿಗಳೂ,ಕಾಯಕಯೋಗಿಗಳೂ ಆದ ಡಾ:ಶಾಂತವೀರ ಮಹಾಸ್ವಾಮೀಜಿಯವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಮತ್ತು ದೂರನ್ನೂ ನೀಡಿರುವ ವಿಚಾರವನ್ನು ನಾವೆಲ್ಲ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇದಾವುದೂ ಸತ್ಯವಲ್ಲ ಮಿತ್ಯ. ದೂರನ್ನು ಆಧರಿಸಿ ಪ್ರಚಾರಗೈದ ಸುದ್ದಿ ಮಾಧ್ಯಮದವರೂ ಕೂಡ ಆಕ್ಷಣದಲ್ಲಿ ವಿವೇಚನೆ ಕಳೆದುಕೊಂಡವರಂತೆ ವರ್ತಿಸಿದುದನ್ನ ನೋಡಿದರೆ ಬೇಸರವಾಗುತ್ತದೆ.

ಏಕೆಂದರೆ ಆಪಾದಿಸುತ್ತಿರುವ ಮತ್ತು ಆಪಾದನೆಗೊಳಗಾಗಿರುವವರ ಪೂರ್ವಾಪರಗಳನ್ನ ಪರಿಶೀಲಿಸಬೇಕಾದ್ದು ಮಾಧ್ಯಮದವರ ಕೆಲಸವಾಗಿತ್ತು ಕಾರಣ ಆಪಾದನೆಗೊಳಗಾದವರು ಸಮಾಜದ ಪುರೋಭಿವೃದ್ದಿಗೆ ಶ್ರಮಿಸುವವರಾಗಿದ್ದರು.
ಸಮಾಜದ ಏಳಿಗೆಗಾಗಿ ತನ್ನ ಇಹಪರಗಳನ್ನ, ಹೆತ್ತು ಹೊತ್ತವರನ್ನ, ಸಾಕಿ ಸಲಹಿದವರನ್ನ, ಬಂಧು ಬಾಂಧವರನ್ನ ವರ್ಜಿಸಿ ಸಮಾಜವೇ ನನ್ನ ಇಹಪರ, ಸಮಾಜವೇ ನನ್ನ ಹೆತ್ತು ಹೊತ್ತವರು, ಸಮಾಜವೇ ನನ್ನ ಸಾಕಿ ಸಲಹಿದವರು,ಸಮಾಜವೇ ನನ್ನ ಬಂಧು ಬಾಂಧವರು, ಎಂದು ಭಾವಿಸಿ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುವವರಾಗಿದ್ದರು. ಕುಂಚಿಟಿಗ ಎಂದು ಹೆಸರೇ ಹೇಳದಿದ್ದ ಕಾಲದಲ್ಲಿ ಕುಂಚಿಟಿಗ ಹೆಸರಿನಲ್ಲಿಯೇ ಮಠ ಸ್ಥಾಪಿಸಿ ದಿಕ್ಕು ತಪ್ಪಿದ್ದ ಕುಂಚಿಟಿಗ ಸಮಾಜಕ್ಕೆ ದಾರಿದೀಪವಾಗಿ ಪ್ರಜ್ವಲಿಸುವ ಕಾಲಘಟ್ಟದಲ್ಲಿ ಪರಮಪೂಜ್ಯರ ಹಾಗೂ ಕುಂಚಿಟಿಗ ಜನಾಂಗದ ಏಳಿಗೆಯನ್ನ ಸಹಿಸದ, ಕಂಡವರ ಮನೆ ಕಾಯಾಲಿಗೆ ಸಾವಿಗೆ ಹೊತ್ತಿಕೊಂಡಂತೆ(ಬೇರೆಯವರು ನೀಡುವ ಪ್ರಸಾದಕ್ಕೆ ಕಾದುಕುಳಿತುಕೊಳ್ಳುವುದು) ಕಾದುಕುಳಿತುಕೊಂಡವರ ಪ್ರಚೋದನೆಗೊಳಗಾಗಿ, ಎಗರಿ ಎಗರಿ ದ್ರಾಕ್ಷಿ ಸಿಗದಿದ್ದಕ್ಕೆ ಹುಳಿಯೆಂದು ಕಾಲ್ಕಿತ್ತ ನರಿಯಂತೆ,
ಕಾದು ಕುಳಿತಿದ್ದವರನ್ನ ಬಳಸಿಕೊಂಡು ಇವರನ್ನು ಹೀಗೇ ಬೆಳೆಯಲು ಬಿಟ್ಟರೆ ಎರಡು ದೋಣಿಯ ಮೇಲೆ ಪ್ರಯಾಣ ಮಾಡುತ್ತಿರುವ ನಮ್ಮ ಪಾಡೇನು ಎಂದು ಚಿಂತಾಕ್ರಾಂತರಾಗಿರುವವರ ಒಕ್ಕೂಟದವರ ಪ್ರಲೋಭನೆಗೆ ಧೃತಿಗೆಡದೆ ಸಮಾಜದ ಏಳಿಗೆಗಾಗಿ ಹಗಲಿರುಳು

ಶ್ರಮಿಸುತ್ತಿರುವವರಾಗಿದ್ದರು.ಶ್ರಮಿಸುತ್ತಿರವಜೋಡಿ ಎತ್ತುಗಳಲ್ಲಿ ಮೊದಲಿಗರಾದ ಕಾಯಕಯೋಗಿ ಕರ್ಮಯೋಗಿ ಶ್ರೀ ಶ್ರೀ ಶ್ರೀ ಡಾ!!ಶಾಂತವೀರ ಮಹಾಸ್ವಾಮೀಜಿಯವರು ಇಂತಹ ಟೀಕೆಗಳಿಗೆ ಹೆದರದೆ ಎದೆಗುಂದದೆ ಮುನ್ನಡೆಯಬೇಕು ನಿಮಗಾದ ನೋವು ಸಮಾಜಕ್ಕಾದ ನೋವು ನಿಮ್ಮೊಂದಿಗೆ ಇಡೀ ಕುಂಚಿಟಿಗ ಸಮಾಜವಿದೆ.ಅಪಾದನೆ ಮಾಡಿರುವವರು ಈವರೆಗೆ ಸಮಾಜಕ್ಕೆ, ಮಠಕ್ಕೆ,ಮಾಡಿರುವ ಸಹಾಯವಾದರೂ ಏನು ಸರ್ಕಾರ ಮತ್ತು ಸಮಾಜದಿಂದ ಮಠಕ್ಕೆ ದೊರೆತ ಸಹಾಯ ಮತ್ತು ಸಹಕಾರದಲ್ಲಿ ಅಪಾದಿತರಿಗೆ ಪಾಲು ನೀಡಬೇಕಿತ್ತೆ ಎಲ್ಲವೂ ಮುಂದೊಂದು ದಿನ ಬಯಲಾಗಲಿದೆ ಯಾವುದಕ್ಕೂ ಎದೆಗುಂದದೆ ಸಮಾಜದ ಏಳಿಗೆಗಾಗಿ ಮುನ್ನಡೆಯಿರಿ ನಿಮ್ಮೊಂದಿಗೆ ನಾವಿದ್ದೇವೆ.

ಕುಂಚಪರಿವಾರ
ಕುಂಚಿಟಿಗರಸಂಘ
ರಾಷ್ಟ್ರೀಯಕುಂಚಿಟಿಗರ ಸಂಘ
ಕುಂಚಿಟಿಗಚಿಂತಕರ ಚಾವಡಿ
ರಾಜ್ಯಕುಂಚಿಟಿಗರ ಸಂಘ
ಬೆಂಗಳೂರು ಕುಂಚಿಟಿಗರ ಸಂಘ
ತುಮಕೂರು ಕುಂಚಿಟಿಗರ ಸಂಘ.
ಮಧುಗಿರಿ ಕುಂಚಿಟಿಗರ ಸಂಘ.
ಕೊರಟಗೆರೆ ಕುಂಚಿಟಿಗರ ಸಂಘ.