ಮೈಸೂರು: ಸಂಗೊಳ್ಳಿ ರಾಯಣ್ಣನಂತೆ ಟಿಪ್ಪು ಸುಲ್ತಾನ್ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂಬ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆ ಬಿಜೆಪಿ ಪಕ್ಷಕ್ಕೆ ಶಾಕ್ ನೀಡಿದೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಟಿಪ್ಪು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ ವ್ಯಕ್ತಿಯಲ್ಲ. ಆತ ಕೂಡ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅವನು ಕೂಡ ಈ ಮಣ್ಣಿನ ಮಗ. ಸರಿಯಾಗಿ ಓದದೇ ಕೆಲವರು ಮಾತನಾಡುತ್ತಾರೆ. ಟಿಪ್ಪು ವಿಷಯವನ್ನು ಸರ್ಕಾರ ಕೈಬಿಟ್ಟಿಲ್ಲ. 5ನೇ ತರಗತಿಯಲ್ಲಿದ್ದ ವಿಷಯ 7ನೇ ತರಗತಿಗೆ ವರ್ಗಾಯಿಸಲಾಗಿದೆ ಎಂದಿದ್ದು ಟಿಪ್ಪು ಸುಲ್ತಾನ್ ಬಗ್ಗೆ ಕಟ್ಟಾ ಬಿಜೆಪಿಯವರು ಟಿಕೆ ಮಾಡುತ್ತಿದ್ದವರಿಗೆ ಎಚ್.ವಿಶ್ವನಾಥ್ ಅವರ ಹೇಳಿಕೆಯಿಂದ ನುಂಗಲಾದ ಬಿಸಿ ತುಪ್ಪವಾಗಿದೆಯಂತೆ.!