ಬೆಂಗಳೂರು: ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಡುವ ನಿರ್ಧಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್​​ ಬಿಎಸ್​ವೈ​ ನಿರ್ಧಾರದ ವಿರುದ್ಧ ಕಿಡಿಕಾರುತ್ತಿವೆ.

ಟಿಪ್ಪು ಪಠ್ಯ ಕೈ ಬಿಡುವ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ​ ಇಂದು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಸಭೆ ಕರೆಯಲಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ಚರ್ಚೆ ನಡೆಯಲಿದೆ. ಸಭೆಯ ನಂತರ ಟಿಪ್ಪು ಪಠ್ಯ ಇರಬೇಕೋ, ಬೇಡವೋ ಎಂಬ ಅಂತಿಮ ನಿರ್ಧಾರ ಸರ್ಕಾರ ಪ್ರಕಟಿಸಲಿದೆ.