ಬೆಂಗಳೂರು : ಇದೇ ಜನವರಿ 28 ರಿಂದ ಫೆಬ್ರವರಿ 5ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿಯವರು, ಜನವರಿ 28ರಿಂದ ಫೆಬ್ರವರಿ 5ರವರೆಗೆ ಈ ಬಾರಿಯ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದೆ. ಈ ಅಧಿವೇಶನವು ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಗಿರಲಿದೆ ಎಂದಿದ್ದಾರೆ. ಇದಲ್ಲದೆ ಬಜೆಟ್ ಸೆಷನ್‌ ಮಾರ್ಚ್‌ ತಿಂಗಳಲ್ಲಿ ಕರೆಯೋದಾಗಿ ತಾತ್ಕಾಲಿಕವಾಗಿ ಯೋಚನೆ ಮಾಡಿದ್ದೀವಿ ಎಂಬುದಾಗಿ ತಿಳಿಸಿದ್ದಾರೆ.