ಬೆಂಗಳೂರು: ಫುಡ್​ ಡೆಲಿವರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೊಮ್ಯಾಟೋ ಮತ್ತು ಸ್ವಿಗ್ಗಿಗೆ ಪ್ರತಿಸ್ಪರ್ಧಿಯಾಗಿ ಆನ್​ಲೈನ್ ಮಾರ್ಕೆಟ್ ದಿಗ್ಗಜ ಸಂಸ್ಥೆ ಅಮೆಜಾನ್ ಕಾಲಿಡುತ್ತಿದೆ.

ಬೆಂಗಳೂರಿನ ಆಯ್ದ ಭಾಗಗಳಲ್ಲಿ ಪ್ರಾಯೋಗಿಕವಾಗಿ ಫುಡ್​ ಡೆಲಿವರಿಯನ್ನು ಮಾಡುವುದಾಗಿ ಘೋಷಿಸಿದೆ. ಇನ್ನು ಜೊಮ್ಯಾಟೋ ಮತ್ತು ಸ್ವಿಗ್ಗಿ ಲಾಕ್​ಡೌನ್​ ಕಾರಣಕ್ಕೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲೇ ಅಮೆಜಾನ್​ನ ಈ ನಡೆ ಉದ್ಯೋಗ ವಲಯದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.