ವಿಜಯಪುರ: ಹಾಗಂತ ಸ್ವತಃ ಎಂ.ಬಿ.ಪಾಟೀಲರು ಹೇಳಿದ್ದಾರೆ. ನನಗೀಗ 54 ವರ್ಷ, ನನಗೆ ಸಿಎಂ ಆಗಬೇಕೆಂಬ ಆಸೆ ಇದೆ ಆದರೆ ದುರಾಸೆ ಇಲ್ಲ’ ಎಂದು ಬಬಲೇಶ್ವರ ಶಾಸಕ,ಮಾಜಿ ಸಚಿವ ಎಂ.ಬಿ.ಪಾಟೀಲ್ ಕಾಂಗ್ರೆಸ್ಗೆ ಹೇಳಿದ್ದಾರೆ.

ಸೋಮದೇವಹಟ್ಟಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.

ನನಗೆ ಸಚಿವ ಸ್ಥಾನ ಸಿಗಲಿ, ಸಿಗದೆ ಇರಲಿ ನಾನು ಈಗಲೂ ಪವರ್ಫುಲ್’ ಎಂದರು. ಇದೇ ವೇಳೆ ‘ಎಲ್ಲದಕ್ಕೂ ಸಮಯ ಬರಬೇಕು ಎಂದು ಮಾರ್ಮಿಕವಾಗಿ ಹೇಳಿದರು.