ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಎರಡು ಪಕ್ಷದಲ್ಲಿ ಖಾತೆ-ಕಾತೆ ಹಂಚಿಕೆ ಬಿಕ್ಕಟು ಬಗೆಹರಿದಿಲ್ಲ ಆಗಲೇ ಜೆಡಿಎಸ್ ನ ಇಬ್ಬರು ಮಂತ್ರಿಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಏಕೆಂದ್ರೆ ಸರಿಯಾದ ಖಾತೆ ಸಿಕ್ಕಿಲ್ಲ ಎಂಬ ವಿಷಯಕ್ಕೆ.

ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿರುವ ಜಿ.ಟಿ ದೇವೇಗೌಡ ಹಾಗೂ ಪುಟ್ಟರಾಜು ಅವರ ಬೆಂಬಲಿಗರಿಂದ ಅಸಮಾಧಾನ ಸ್ಫೊಟಗೊಂಡಿದೆ.ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರ ಬೆಂಬಲಿಗರೇ ಸ್ವತಃ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಮುಖಂಡ ಮುಖ್ಯಮಂತ್ರಿ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆ ಸುಳ್ಳಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮಾನಾದ ಅಧಿಕಾರ ನೀಡುವುದಾಗಿ ಹೇಳಿದ್ದರು. ಈಗ ಜಿಟಿಡಿ ಅವರಿಗೆ ಕೇಳಿದ ಖಾತೆ ಸಿಕ್ಕಿಲ್ಲ. ಖಾತೆ ಕೊಡುವುದಕ್ಕು ಮುನ್ನ ಸಮಾಲೋಚನೆ ಸಹ ನಡೆಸಿಲ್ಲ. ವರಿಷ್ಟರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪ್ತರ ಬಳಿ ಜಿಟಿಡಿ ಅವರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಟಿಡಿ ಮನೆ ಮುಂದೆ ಬೆಂಬಲಿಗರಿಂದ ಪ್ರತಿಭಟನೆಯೂ ಕೂಡ ನಡೆಯಲಿದೆ. ಜೆಡಿಎಸ್ ವರಿಷ್ಟ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತದೆ. ಜಿಟಿ ದೇವೇಗೌಡ ಅವರು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು,  ಈಗಾಗಲೇ ಸರ್ಕಾರಿ ಕಾರನ್ನು ನಿನ್ನೆಯೇ ವಾಪಸ್ ಕೊಟ್ಟಿದ್ದಾರಂತೆ ಹಾಗಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ ಅಷ್ಟೆ.!