ಚಿತ್ರದುರ್ಗ: ಚುನಾವಣಾ ನೀತಿ ಸಂಹಿತೆಜಾರಿಯಲ್ಲಿರುವಾಗಅನುಮತಿ ಪಡೆಯದೆ ಮೊಬೈಲ್ ಮೂಲಕ ಬಲ್ಕ್‌ಎಸ್.ಎಂ.ಎಸ್ ಹಾಗೂ ವಾಯ್ಸ್‌ಮೆಸೇಜ್ ಕಳುಹಿಸಿದ ಚಿತ್ರದುರ್ಗವಿಧಾನಸಭಾ ಕ್ಷೇತ್ರದ ಜಾತ್ಯಾತೀತಜನತಾದಳದ ಅಭ್ಯರ್ಥಿ ಕೆ.ಸಿ.ವೀರೇಂದ್ರ ಇವರಿಗೆ ಚುನಾವಣಾಧಿಕಾರಿಯವರು ನೋಟಿಸ್ ನೀಡಿದ್ದಾರೆ.

ಜೆ.ಡಿ.ಎಸ್. ಅಭ್ಯರ್ಥಿ ಕೆ.ಸಿ.ವೀರೇಂದ್ರ ಇವರುಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಭಾವಿಯಾಗಿಅನುಮತಿ ಪಡೆಯದೇಏಪ್ರಿಲ್ ೨೬ ರಂದು ನಡೆದರ್‍ಯಾಲಿಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮೊಬೈಲ್ ಮೂಲಕ ಬಲ್ಕ್‌ಎಸ್.ಎಂ.ಎಸ್ ಹಾಗೂ ವಾಯ್ಸ್‌ಎಸ್.ಎಂ.ಎಸ್. ಕಳುಹಿಸಿದ್ದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾರವರು ಎಂ.ಸಿ.ಎಂ.ಸಿ. ಸಮಿತಿಅಧ್ಯಕ್ಷರಾಗಿದ್ದುಅನುಮತಿ ಪಡೆಯದೇ ಬಲ್ಕ್‌ಎಸ್.ಎಂ.ಎಸ್., ವಾಯ್ಸ್ ಮೆಜೇಸ್ ಕಳುಹಿಸಿರುವ ಬಗ್ಗೆ ದೂರನ್ನು ಆಧರಿಸಿ ಅಭ್ಯರ್ಥಿಗೆ ನೋಟಿಸ್ ನೀಡಿ ಈ ಬಗ್ಗೆ ವಿವರಣೆ ಪಡೆದುಕೊಳ್ಳಲು ಸೂಚನೆ ನೀಡಿದ್ದರು.
ಜಿಲ್ಲಾಚುನಾವಣಾಧಿಕಾರಿಯವರ ನಿರ್ದೇಶನದ ಮೇರೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯವರು ಅಭ್ಯರ್ಥಿಗೆನೋಟಿಸ್ ನೀಡಿದ ೨೪ ಗಂಟೆಯೊಳಗಾಗಿ ಅನುಮತಿ ಪತ್ರ ಹಾಗೂ ಲೆಕ್ಕಪತ್ರವನ್ನು ಹಾಜರುಪಡಿಸಲು ತಿಳಿಸಿ ಇದನ್ನು ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕಾನೂನು ಕ್ರಮಜರುಗಿಸಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.