ಚಿತ್ರದುರ್ಗ:  ದುರ್ಗದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ರ ಮೆದೇಹಳ್ಳಿಯಲ್ಲಿರುವ ಮನೆಯಲ್ಲಿ ನಿನ್ನೆ ತಡ ರಾತ್ರಿ ( ಬುಧವಾರ) ಐಟಿ ರೇಡ್ ಮಾಡಲಾಗಿತ್ತು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳಗಿನಜಾವ 4 ರವರೆಗೆ ತಪಾಸಣೆ ನಡೆಸಿದ ಸಂದರ್ಭದಲ್ಲಿ 1148800 ಸಿಕ್ಕಿದೆ ಎಂದು ವಾರ್ತಾಇಲಾಖೆ ಹೇಳಿದೆ.

ಈ ಹಿಂದೆ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಚಳ್ಳಕೆರೆಯಲ್ಲಿರುವ ಪಪ್ಪಿ ಮನೆಯ ಬಾತ್ ರೂಂನಲ್ಲಿ ಕೋಟಿ ಕೋಟಿ ಹಣ ಬಂಗಾರ ಸಿಕ್ಕಿದ್ದು ಹಸಿಯಾಗಿರುವಾಗಲೇ ಚುನಾವಣೆಯ ಸಮಯದಲ್ಲಿ ಇಷ್ಟೊಂದು ಹಣ ಸಿಕ್ಕಿರುವುದು ಆಶ್ಚರ್ಯ ಉಂಟುಮಾಡಿದೆ.