ಬೆಂಗಳೂರು: ಈಗಾಗಲೇ ದೊಸ್ತಿ ಸರಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಭಿನ್ನಮತ ಹೆಚ್ಚುತ್ತಿದೆ. ಹೇಗಾದರೂ ಮಾಡಿ ಭಿನ್ನಮತವನ್ನು ಶಮನಗೊಳಿಸಲು  ಜೂ. 17 ರಂದು ಸಂಪುಟ ವಿಸ್ತರಣೆ ನಡೆಸಲು ನಿರ್ಧರಿಸಿದೆ ಯಂತೆ.

ಸಂಪುಟದಲ್ಲಿ ತನ್ನ ಖೋಟಾದಡಿ ಇನ್ನೂ 6 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿರುವ ಕಾಂಗ್ರೆಸ್, ಈ ಪೈಕಿ ನಾಲ್ಕು ಸ್ಥಾನಗಳನ್ನು ತುರ್ತಾಗಿ ಭರ್ತಿ ಮಾಡಲು ಮುಂದಾಗಿದೆ.

ಈ ವಿಷಯವನ್ನು ಸಿಎಂ ಕುಮಾರಸ್ವಾಮಿ ಅವರಿಗೆ ಪಕ್ಷದ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದು, ಭಾನುವಾರ ಮತ್ತೊಂದು ಕಂತಿನ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದ್ರೆ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಮಾತ್ರ ಕಾಯಬೇಕಿದೆ.