ನವದೆಹಲಿ : ಜೂನ್ 8 ರಿಂದ ಧಾರ್ಮಿಕ ಸ್ಥಳ, ರೆಸ್ಟೋರೆಂಟ್ ಹಾಗೂ ಮಾಲ್ ಗಳು ಓಪನ್ ಆಗಲಿದ್ದು, ಸುರಕ್ಷತಾ ಕ್ರಮಗಳ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವುದಕ್ಕಾಗಿ ದೈಹಿಕ ಅಂತರ, ಮಾಸ್ಕ್ ಮತ್ತು ಗ್ಲೌಸ್ ಬಳಕೆ, ಶುಚಿತ್ವ ಕಾಪಾಡುವುದು ಸೇರಿದಂತೆ ಕೆಲ ಸಾಮಾನ್ಯ ನಿಯಮಗಳು ಎಲ್ಲ ಕಡೆಯೂ ಕಡ್ಡಾಯವಾಗಿ ಅನ್ವಯವಾಗುತ್ತವೆ.

ಧಾರ್ಮಿಕ ಸ್ಥಳಗಳಿಗೆ ಏನೇನು ರೂಲ್ಸ್.?

ಕಂಟೈನ್ಮೆಂಟ್ ಝೋನ್ ನಲ್ಲಿ ದೇವಾಲಯ ತೆರೆಯುವಂತಿಲ್ಲ. ಧಾರ್ಮಿಕ ಸ್ಥಳದಲ್ಲಿ ಮೂರ್ತಿಗಳನ್ನು ಮುಟ್ಟುವಂತಿಲ್ಲ. ದೇವರ ಪ್ರತಿಮೆ, ಪುಸ್ತಕಗಳನ್ನು ಮುಟ್ಟಬಾರದು. ಧಾರ್ಮಿಕ ಸ್ಥಳದಲ್ಲಿ ಹೆಚ್ಚಿನ ಜನ ಸೇರಬಾರದು.ಹಾಡು, ಭಾಷಣಕ್ಕೆ ಗುಂಪು ಸೇರಿವಂತಿಲ್ಲ. ಭಕ್ತಾದಿಗಳು ಪರಸ್ಪರ ಸಾಮಾಜಿಕ ಅಂತರ ಕಾಪಾಡಬೇಕು. ಪ್ರಾರ್ಥನೆ ವೇಳೆ ಪ್ರತ್ಯೇಕ ಮ್ಯಾಟ್ ಬಳಸಬೇಕು. ಧಾರ್ಮಿಕ ಸ್ಥಳದ ಪ್ರವೇಶದಲ್ಲೇ ಸ್ಯಾನಿಟೈಸ್. ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್. ಕೊರೋನಾ ಲಕ್ಷಣಗಳು ಇಲ್ಲದಿದ್ದರೇ ಮಾತ್ರ ಎಂಟ್ರಿ. ಎಂಟ್ರಿ, ಎಕ್ಸಿಟ್ ಗಾಗಿ ಪ್ರತ್ಯೇಕ ಬಾಗಿಲು ಇರಬೇಕು.

ಹೊಟೇಲ್, ರೆಸ್ಟೋರೆಂಟ್ಸ್ ರೋಲ್ಸ್. ಹೋಟೆಲ್ ಗೆ 65 ವರ್ಷ ಮೇಲ್ಪಟ್ಟವರಿಗೆ ನಿರ್ಬಂಧ. ಗರ್ಭಿಣಿ, 10ರ ಒಳಗಿನ ಮಕ್ಕಳಿಗೂ ನಿಷೇಧ. ಮಾಸ್ಕ್, ಸಾಮಾಜಿಕ ಅಂತರ ಪಾಲಿಸಬೇಕು. ರೆಸ್ಟೋರೆಂಟ್ ಗಳಲ್ಲಿ ಟೇಕ್ ಅವೇ ಸೌಲಭ್ಯ. ಪಾರ್ಸಲ್ ಗಳನ್ನು ಕೈಯಿಂದ ಕೈಗೆ ಕೊಡುವಂತಿಲ್ಲ. ಹೋಂ ಡೆಲಿವರಿ ಬಾಯ್ಸ್ ಗೆ ಸ್ಕ್ರೀನಿಂಗ್ ಮಾಡಬೇಕು. ಪಾರ್ಕಿಂಗ್ ನಲ್ಲಿ ಅಂತರ ಕಾಪಾಡಬೇಕು. ರೆಸ್ಟೋರೆಂಟ್ ನಲ್ಲಿ ಪೇಪರ್ ನ್ಯಾಪ್ಕಿನ್ಸ್ ಬಳಸಿ. ಹೋಟೆಲ್ ಗಳಲ್ಲಿ ಪರಸ್ಪರ 6 ಅಡಿ ಅಂತ ಕಾಪಾಡಬೇಕು. ಬಫೆ ಸಿಸ್ಟಂ ನಲ್ಲೂ ಅಂತರ ಕಾಪಾಡ ಬೇಕು ಎಂದು ಮಾರ್ಗ ಸೂಚಿಯಲ್ಲಿ ತಿಳಿಸಿದೆ.