ಬೆಂಗಳೂರು : ಜುಲೈ 5 ರಿಂದ ಭಾನುವಾರ ರಾಜ್ಯ ಸಂಪೂರ್ಣ ಬಂದ್ ಆಗಲಿದ್ದು, ಈ ನಡುವೆ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್ ಡೌನ್ ಗೆ ನಿರ್ಧರಿಸಲಾಗಿದ್ದು, ಜೂನ್ 27 ರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಭಾನುವಾರ ಏನಿರಲ್ಲ?, ಬಿಎಂಟಿಸಿ ಬಸ್ ಸೇವೆ ಸಂಪೂರ್ಣ ಬಂದ್, ಆಟೋ. ಕ್ಯಾಬ್, ಓಲಾ ಸೇವೆ ಇರಲ್ಲ,

ದೇವಸ್ಥಾನ, ಮಸೀದಿ, ಚರ್ಚ್ ಬಾಗಿಲು ತೆರೆಯುವುದಿಲ್ಲ,  ಶಾಪಿಂಗ್ ಮಾಲ್ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಬೀದಿ ಬದಿ ವ್ಯಾಪಾರ ಬಂದ್, ಅಂತರ್ ಜಿಲ್ಲಾ ಪ್ರವಾಸ ಕಂಪ್ಲಿಟ್ ಬಂದ್

ಏನಿರುತ್ತೆ? ಹಾಲು, ಮೊಸರು, ತರಕಾರಿ ಮತ್ತು ಪೇಪರ್ ಸಿಗಲಿದೆ, ಮಡಿಕಲ್ ಶಾಪ್ ಗಳು, ಆಂಬುಲೆನ್ಸ್, ವೈದ್ಯಕೀಯ ಸೇವೆಗಳು ಮಾತ್ರ ಲಭ್ಯವಿರಲಿದೆ. ಕೆಎಸ್‌ಆರ್ ಟಿಸಿ ಬಸ್ ಸಂಚಾರ ಪರಿಸ್ತಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.