ಬೆಂಗಳೂರು: ನೂತನ  ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಇಂದು ವಿಧಾನಸೌಧದಲ್ಲಿ ವಾಸ್ತು ಶಾಸ್ತ್ರ ಪೂಜೆ ಸಲ್ಲಿಸಿದ್ದಾರೆ.

ವಿಧಾನಸೌಧ 3ನೇ ಮಹಡಿಯ ಕೊಠಡಿ ಸಂಖ್ಯೆ 327, 328ರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವಿಶೇಷ ಪೂಜೆಗೆ ಮೀಡಿಯಾದವರಿಗೆ ಚಿತ್ರೀಕರಣ ಮಾಡದಂತೆ ತಡೆಹಿಡಿಯಲಾಗಿದ್ದು ಮಾಧ್ಯಮದವರನ್ನು ಹೊರಗೆ ಕಳುಹಿಸಿದ್ದಾರೆ ಇದು ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

ಪತ್ನಿ ಕನ್ನಿಕ ನೇತೃತ್ವದಲ್ಲಿ ಪರಮೇಶ್ವರ್ ಅವರು ಹೋಮ-ಹವನ ನಡೆಸಿದ್ದಾರೆ. ಇದೇ ವೇಳೆ ಪರಮೇಶ್ವರ್ ಅವರು ತಾವೊಬ್ಬ ದಲಿತ, ಅಂಬೇಡ್ಕರ್ ನ ಅನುಯಾಯಿ ಅಂತ ಹೇಳಿಕೊಳ್ಳುತ್ತಾರೆ. ಹೀಗೆ ತಮ್ಮ ಕಚೇರಿಗೆ ಪೂಜೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಅಂತ ಜನತೆ ಕೇಳಿದರೆ.?

( ಸಾಂದರ್ಭಿಕ ಚಿತ್ರ)