ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳ ಸದಸ್ಯರ ಸಂಖ್ಯೆ ಹೆಚ್ಚಳ ಸಂಬಂಧ ನಡೆದ ಸಭೆಯಲ್ಲಿ ಯಾವುದೇ ರೀತಿಯ ತೀರ್ಮಾನವಾಗದೆ ಗೊಂದಲದಲ್ಲಿಯೇ ಜು. 27 ರಂದು 5 ಜನ ಸದಸ್ಯರ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸ್ಥಾಯಿ ಸಮಿತಿ ಅಧ್ಯಕ್ಷರ ಮತ್ತು ಸದಸ್ಯರು ಆಯ್ಕೆ ಸಂಬಂಧ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಹಿಂದೆ ಸ್ಥಾಯಿ ಸಮಿತಿಯಲ್ಲಿ 5 ಜನ ಸದಸ್ಯರನ್ನು ಮಾಡಿಕೊಂಡು 20 ತಿಂಗಳು ಆಧಿಕಾರವನ್ನು ನಡೆಸಲಾಯಿತು. ಅವರು ಅವಧಿ ಮುಗಿದಿದ್ದರಿಂದ ಈಗ ಮತ್ತೇ ಹೊಸದಾಗಿ ಸ್ಥಾಯಿ ಸಮಿತಿಗೆ ಅಧ್ಯಕ್ಷರು ಸದಸ್ಯರು ಮತ್ತೇ ಎರಡು ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಿದೆ ಈ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಸದಸ್ಯರು 5 ಇರಬೇಕಾ ಅಥವಾ 7 ಜನ ಇರಬೇಕಾ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಅಂತಿಮವಾಗಿ ಯಾವುದೇ ನಿರ್ಣಯವನ್ನು ಮಾಡಲಾಗಿದೆ ಜು. 27 ರಂದು ಸ್ಥಾಯಿ ಸಮಿತಿಗೆ ಈ ಹಿಂದೆ ಇದ್ದಂತೆ 5 ಜನ ಸದಸ್ಯ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಸಭೆಯ ಅಧ್ಯಕ್ಷತೆವಹಿಸಿದ್ದ ಸೌಭಾಗ್ಯ ಬಸವರಾಜನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆ ಪ್ರಾರಂಭವಾಗುತ್ತಿದ್ದಂತೇಯೆ ಬಿಜೆಪಿ ಸದಸ್ಯರಾದ ಅಜ್ಜಪ್ಪ ಮಾತನಾಡಿ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸ್ಥಾಯಿ ಸಮಿತಿಗೆ ಅಧ್ಯಕ್ಷರು ಸೇರಿದಂತೆ 7 ಜನ ಮೀರದಂತೆ ಆಯ್ಕೆ ಮಾಡಬಹುದೆಂದು ನಿಯಮ ಇದ್ದರೂ ಸಹಾ ಅದನ್ನು ಮೀರಿ ವಿ ನಿಯಮದ ಮೂಲಕ ತಿದ್ದುಪಡಿ ಮಾಡಿ ಸಾಮಾನ್ಯ ಸಭೆಯಲ್ಲಿ ಬಹುಮತದೊಂದಿಗೆ ತೀರ್ಮಾನ ಮಾಡಿ 5 ಜನ ಸದಸ್ಯರನ್ನು ನೇಮಕ ಮಾಡಿ 20 ತಿಂಗಳ ಕಾಲ ಅಧಿಕಾರವನ್ನು ನಡೆಸಿದ್ದೀರಾ ಆದರೆ ಈ ಬಾರಿಯಾದರೂ ಸ್ಥಾಯಿ ಸಮಿತಿಗೆ ಕಾಯ್ದೆಯಂತೆ 7 ಜನ ಸದಸ್ಯರನ್ನು ಆಯ್ಕೆ ಮಾಡುವುದರ ಮೂಲಕ ನಮಗೂ ಸಹಾ ಕೆಲಸ ಮಾಡಲು ಅವಕಾಶ ನೀಡಿ ಇದರ ಬಗ್ಗೆ ಮನವಿಯನ್ನು ನೀಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಇದರ ಬಗ್ಗೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಆಕ್ಷೇಪಣೆಯನ್ನು ವ್ಯಕ್ತಪಡಿಸಿ ಈಗಾಗಲೆ ಬಹಳ ವೇಳೆಯಾಗಿದೆ ಚುನಾವಣೆ ಬಂದಿದ್ದರಿಂದ ನೀತಿ ಸಂಹಿತೆಯಿಂದಾಗಿ ಸಭೆಯನ್ನು ಮಾಡಲಾಗಿದೆ ಸ್ಥಾಯಿ ಸಮಿತಿಗಳ ಅವಧಿ ಮೀರಿದ್ದರೂ ಸಹಾ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿಲ್ಲ ಇದರಿಂದ ಈಗ ಸದಸ್ಯ ಸ್ಥಾನವನ್ನು 5 ರಿಂದ 7ಕ್ಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ ಆದರೆ ಇದು ನಮ್ಮ ಕೈಯಲ್ಲಿ ಇಲ್ಲ ಇದರ ಬಗ್ಗೆ ನಮ್ಮ ಪಕ್ಷದ ವರಿಷ್ಠತ ಜೊತೆಯಲ್ಲಿ ಮಾತನಾಡಿ ಸಾಮಾನ್ಯಸಭೆಯಲ್ಲಿ ತೀರ್ಮಾನ ಮಾಡಿ ನಿರ್ಣಯವನ್ನು ಮಾಡುವುದರ ಮೂಲಕ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿ ಅಲ್ಲಿಂದ ಅನುಮೋದನೆಯಾದಾಗ ಚುನಾವಣೆ ಮಾಡಿ ನಂತರ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಬೇಕಾಗುತ್ತದೆ ಇಷ್ಟರ ವೇಳೆಗೆ ಸುಮಾರು 3 ರಿಂದ 4 ತಿಂಗಳಾಗುತ್ತದೆ ಎಂದು ತಿಳಿಸಿದರು.

ಇದರ ಬಗ್ಗೆ ಮಾತನಾಡಿದ ಬಿಜೆಪಿ ಸದಸ್ಯ ಮಲ್ಲೇಶಪ್ಪ, ತಡವಾದರೂ ಚಿಂತೇ ಇಲ್ಲ ಸರ್ಕಾರದಿಂದ ಅನುಮೋದನೆ ಬಂದ ಮೇಲೆ ಸ್ಥಾಯಿ ಸಮಿತಿಗೆ ಚುನಾವಣೆಯನ್ನು ಮಾಡಿ ಇದರಿಂದ ಎಲ್ಲರಿಗೂ ಸಹ ಆವಕಾಶ ಸಿಕ್ಕಂತೆ ಆಗುತ್ತದೆ ಎಂದು ಹೇಳೀದಾಗ ಮತ್ತೋರ್ವ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ ಮೂರ್ತಿ ಮಾತನಾಡಿ ವಿ ನಿಯಮ ನಮಗಾಗಿಯೇ ಇರುವುದು ಇದರಿಂದ ಮುಂಚೆ 5 ಜ ಸದಸ್ಯ ಬಲದ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿ ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಸಮಿತಿಗೆ ತಲಾ ಇಬ್ಬರನ್ನು ಸೇರಿಸಿಕೊಳ್ಳಲು ಅವಕಾಶ ಮಾಡಿಕೊಂಡು ನಿಮ್ಮನ್ನು ಸಹಾ ಸಮಿತಿಗೆ ಸೇರಿಸಿಕೊಳ್ಳಲಾಗುವುದೆಂದು ಬಿಜೆಪಿ ಸದಸ್ಯರನ್ನು ಒಪ್ಪಿಸಲು ಪ್ರಯತ್ನ ಮಾಡಿದಾಗ ಇದಕ್ಕೆ ಒಪ್ಪದ ಸದಸ್ಯರು ನಿಯಮದಲ್ಲಿ ಒಮ್ಮೆ ಚುನಾವಣೆಯಾದ ಮೇಲೆ ಅದನ್ನು ಬದಲಾವಣೆ ಮಾಡಲು 20 ತಿಂಗಳವರೆಗೆ ಕಾಯಬೇಕಿದೆ ಇದರಿಂದ ಬೇಡ ಬದಲಾವಣೆ ಮಾಡುವುದಾದರೆ ಚುನಾವಣೆಗಿಂತ ಮುಂಚೆ ಮಾಡಿ ಇಲ್ಲವೆ ಇದರ ಬಗ್ಗೆ ಬಹುಮತ ಪಡೆಯಿರಿ ಎಂದರು.

ಸದಸ್ಯರ ಸಂಖ್ಯೆ ಹೆಚ್ಚಳ ಚುನಾವಣೆ ನಂತರ ಸದಸ್ಯರ ಸೇರ್ಪಡೆ ಬಗ್ಗೆ ಜಿ.ಪಂ. ಸಿಇಓರವನ್ನು ಕಾನೂನು ಅಭಿಪ್ರಾಯವನ್ನು ಪಡೆದಾಗ ಅವರು ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆ ಇಳಿಕೆ ಅಥವಾ ಏರಿಕೆ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದರ ಮೂಲಕ ಅನುಮತಿ ಪಡೆಯಬೇಕಿದೆ ಎಂದರು. ಈ ಮಧ್ಯೆ ಅಧ್ಯಕ್ಷರು ಸದಸ್ಯರ ಸಂಖ್ಯೆ ಎಷ್ಟಿರಬೇಕು ಎಂಬುದರ ಬಗ್ಗೆ ಮತಕ್ಕೆ ಹಾಕುವಂತೆ ಸೂಚನೆ ನೀಡಿದಾಗ ಸಿಇಓರವರು ಮುಂದಾದಾಗ ಕೃಷ್ಣಮೂರ್ತಿ ತಡೆಯೊಡ್ಡಿ ಈಗ ಸಭೆಯಲ್ಲಿ ನಮ್ಮ ಸಂಖ್ಯೆ ಹೆಚ್ಚಾಗಿದೆ ಅವರ ಸಂಖ್ಯೆ ಕಡಿಮೆ ಇದರಿಂದ ಅವರಿಗೆ ಸೋಲು ಉಂಟಾಗುತ್ತದೆ ಇದರಿಂದ ಮತಕ್ಕೆ ಹಾಕುವ ಕೆಲಸ ಬೇಡ ಇದರ ಬದಲಾಗಿ ಚುನಾವಣೆಯ ದಿನಾಂಕವನ್ನು ನಿಗಧಿ ಮಾಡಿ ನಂತರ ಅವರನ್ನು ಸಹಾ ಸಮಿತಿಯ ಒಳಗೆ ಕರೆದುಕೊಂಡು ಹೋಗುವ ಕೆಲಸ ಮಾಡಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

ಸದಸ್ಯರ ಚರ್ಚೆಯ ನಂತರ ಅಧ್ಯಕ್ಷರು ಈ ಹಿಂದೆ ಇದ್ದ ರೀತಿಯಲ್ಲಿಯೇ 5 ಜನ ಸದಸ್ಯ ಸಮಿತಿಗೆ ಚುನಾವಣೆ ನಡೆಸುವಂತೆ ದಿನಾಂಕವನ್ನು ನಿಗಧಿ ಮಾಡಿ ಅದಕ್ಕೆ ತಕ್ಕ ಪ್ರಕ್ರಿಯೇ ಮಾಡುವಂತೆ ಅಧಿಕಾರಿಗಳಿಗೆ ಶ್ರೀಮತಿ ಸೌಭಾಗ್ಯ ಬಸವರಾಜನ್ ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಜಯಮ್ಮ ಬಾಲರಾಜ್, ಉಪಾಧ್ಯಕ್ಷರಾದ ಸುಶೀಲಮ್ಮ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.