ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ಬಸವರಾಜನ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿ.ಪಂ. ಸದಸ್ಯರು ಹಾಗು ಅವರ ಬೆಂಬಲಿಗರು  ಪ್ರತಿಭಟನೆ ನಡೆಸಿದರು.

ಇಂದು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ನಡೆಯುವ ಸಂಧರ್ಭದಲ್ಲಿ ಸೌಭಾಗ್ಯ ಬಸವರಾಜನ್ ವಿರುದ್ದ ದಿಕ್ಕಾರ ಮೊಳಗಿತು.

ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಗುವ ಸಂದರ್ಭದಲ್ಲಿ ಒಡಂಬಡಿಕೆಯಂತೆ, ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದ್ರೆ ಸೌಭಾಗ್ಯ ಬಸವರಾಜನ್ ರಾಜೀನಾಮೆ ನೀಡಲಿಲ್ಲ ಇದರಿಂದ ರೊಚ್ಚಿಗೆದ್ದ ಜಿ.ಪಂ ಸದಸ್ಯರು ರಾಜೀನಾಮೆಗೆ ಒತ್ತಾಯಿಸಿ. ಪ್ರತಿಭಟನೆಗೆ ಮುಂದಾಗಿದ್ದಾರೆ.

ಆದ್ರೆ ಎಲ್ಲಾ ಬೆಳವಣಿಗೆಯನ್ನು ಕಂಡ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮೌನವಾಗಿದ್ದಾರೆ.