ನವದೆಹಲಿ: ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಜಿ.ಎಸ್.ಟಿ. ಗೆ ಕೋವಿಡ್ ಸೆಸ್ ಸೇರ್ಪಡೆ ಮಾಡಲಿದೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಹರಡಿತ್ತು.

ಏಕೆಂದರೆ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ಜಾರಿಗೊಳಿಸಿದ್ದು, ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಇದರ ಜೊತೆಗೆ ಸರ್ಕಾರ, ಸಂಕಷ್ಟದಲ್ಲಿರುವವರ ನೆರವಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದನ್ನು ನಿಭಾಯಿಸುವ ಸವಾಲು ಎದುರಾಗಿತ್ತು.

ಆದರೆ ಈ ವದಂತಿಗಳಿಗೆ ಸರ್ಕಾರ ಈಗ ತೆರೆ ಎಳೆದಿದ್ದು, ಅಂತಹ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ತಿಳಿಸಿದೆ. ಹೀಗಾಗಿ ಈಗಾಗಲೇ ಸಂಕಷ್ಟದಲ್ಲಿರುವ ನಮ್ಮ ಮೇಲೆ ಮತ್ತಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂಬ ತೆರಿಗೆ ದಾರರು ಆತಂಕದಲ್ಲಿದ್ದರು ಈಗ ನಿರಾಳ.!