ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 12 ರಂದು ನಡೆದ ಮತದಾನದಲ್ಲಿ ಸಂಜೆ 6 ರ ವೇಳೆಗೆ ಶೇ 76 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದರು. ಸಂಜೆ 6 ರ ವೇಳೆಗೆ ಇನ್ನೂ ಅನೇಕ ಮತದಾನ ಕೇಂದ್ರಗಳಲ್ಲಿ ಮತದಾನ ಮುಕ್ತಾಯದ ಹಂತದಲ್ಲಿದ್ದು ಅಂತಿಮ ಮತದಾನ ವಿವರ ರಾತ್ರಿ ವೇಳೆಗೆ ಲಭ್ಯವಾಗಲಿದೆ. ಈ ಮತದಾನ ವಿವರ ಇನ್ನೂ ಹೆಚ್ಚುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮೊಳಕಾಲ್ಮುರು ಶೇ 77, ಚಳ್ಳಕೆರೆ ಶೇ 73, ಚಿತ್ರದುರ್ಗ ಶೇ 71, ಹಿರಿಯೂರು ಶೇ 75, ಹೊಸದುರ್ಗ ಶೇ 81, ಹೊಳಲ್ಕೆರೆ ಶೇ 80 ರಷ್ಟು ಮತದಾನವಾಗಿದೆ.