ಚಿತ್ರದುರ್ಗ: ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸತತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳ, ಕೆರೆ, ಗೋಕಟ್ಟೆಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ನದಿ, ಕೆರೆ,  ಹಳ್ಳ ಮುಂತಾದ ನೀರಿನ ಹರಿವು ಇರುವ ಸ್ಥಳಗಳಲ್ಲಿ ಇರುವ ನಿವಾಸಿಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಇರುವ ನಿವಾಸಿಗಳು ಗುಡಿಸಲು ಮತ್ತು ಮಣ್ಣಿನ ಮನೆಗಳಲ್ಲಿ ವಾಸವಾಗಿರುವ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.

ಹೆಚ್ಚಿನ ಮಳೆಯಿಂದಾಗಿ ನೀರು ನುಗ್ಗುವಂತಹ ಸಂದರ್ಭಗಳು ಇದ್ದಲ್ಲಿ, ಸತತ ಮಳೆಯಿಂದಾಗಿ ಮನೆಯು ಹಾನಿಗೊಂಡು ಬೀಳುವ ಸಂಭವವಿದ್ದಲ್ಲಿ ಗ್ರಾಮಗಳು, ಸ್ಥಳಗಳಲ್ಲಿ ಇರುವಂತಹ ಸಾರ್ವಜನಿಕ ಸಮುದಾಯ ಭವನಗಳು, ದೇವಸ್ಥಾನಗಳು, ಸರ್ಕಾರಿ ಶಾಲೆಗಳು ಮುಂತಾದ ಕಡೆ ತಂಗಲು ವ್ಯವಸ್ಥೆ ಮಾಡಲಾಗುವುದರಿಂದ ಭಾದಿತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಇಂತಹ ಸಂದರ್ಭದಲ್ಲಿ ಸೂಕ್ತ ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ:08194-222538 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.