ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ ಮತ್ತೆ 14 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 334 ಕ್ಕೆ ಏರಿಕೆಯಾದಂತಾಗಿದೆ.

ಶುಕ್ರವಾರದ ವರದಿಯಲ್ಲಿ ಚಿತ್ರದುರ್ಗ ತಾಲ್ಲೂಕು-11, ಚಳ್ಳಕೆರೆ-02, ಮೊಳಕಾಲ್ಮೂರು-01 ಸೇರಿದಂತೆ ಒಟ್ಟು 14 ಪಾಸಿಟಿವ್ ಪ್ರಕರಣ ವರದಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 35, 03, 27, 56, 12, 46 ವರ್ಷದ ಪುರುಷರು, 65, 39, 17, 10, 18 ವರ್ಷದ ಮಹಿಳೆಯರು. ಚಳ್ಳಕೆರೆ ತಾಲ್ಲೂಕಿನಲ್ಲಿ 38, 28 ವರ್ಷದ ಮಹಿಳೆಯರು. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 68 ವರ್ಷದ ಮಹಿಳೆ ಸೇರಿದಂತೆ ಒಟ್ಟು 14 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಶುಕ್ರವಾರ ಒಟ್ಟು 295 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 14 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 334 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 07 ಜನ ಮೃತಪಟ್ಟಿದ್ದಾರೆ.  ಸೋಂಕಿತರ ಪೈಕಿ ಈಗಾಗಲೆ 137 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 190 ಸಕ್ರಿಯ ಪ್ರಕರಣಗಳು ಇವೆ.
190 ಸಕ್ರಿಯ ಪ್ರಕರಣಗಳ ಪೈಕಿ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 42, ಭರಮಸಾಗರ-11, ಹಿರಿಯೂರು ತಾಲ್ಲೂಕು ಧರ್ಮಪುರ-29, ಚಳ್ಳಕೆರೆ ತಾಲ್ಲೂಕು ಪರಶುರಾಂಪುರ- 10, ಹೊಸದುರ್ಗ ತಾಲ್ಲೂಕು ಬೆಲಗೂರು- 14, ಕೆ.ಕೆ. ಪುರ 09, ಮೊಳಕಾಲ್ಮೂರು ತಾಲ್ಲೂಕು ರಾಂಪುರ 01,   ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ- 07, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ-08, ಹೊಳಲ್ಕೆರೆ ಹಾಸ್ಟೆಲ್ ಕೋವಿಡ್ ಕೇರ್ ಸೆಂಟರ್‍ನಲ್ಲಿ 03, ಚಿತ್ರದುರ್ಗ ಜೆಎಂಐಟಿ ವೃತ್ತದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ 02. ಜಿಲ್ಲೆಯಲ್ಲಿ ಪಾಸಿಟೀವ್ ಕಂಡುಬಂದು, ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 11.  ಉಳಿದ 23 ಜನರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು 89 ಕಂಟೈನ್ಮೆಂಟ್ ವಲಯಗಳಿವೆ.  ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 3468 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.  ಈವರೆಗೆ ಸಾರಿ ಮತ್ತು ಐಎಲ್‍ಐ, ಯುಆರೈನ ಒಟ್ಟು 3823 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ 1004 ಜನ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ. ಈವರೆಗೆ 12,139 ಜನರ ಮಾದರಿ ಸಂಗ್ರಹಿಸಲಾಗಿದ್ದು, 10,839 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 213 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.